
ಮೈಸೂರು
ಸಹಕಾರ ತತ್ವ ಅಳವಡಿಸಿಕೊಂಡರೆ ಅಭಿವೃದ್ದಿ ಕಾಣಲು ಸಾಧ್ಯ: ಪ್ರಶಾಂತ್ ಗೌಡ
ಬೈಲಕುಪ್ಪೆ: ಸಹಕಾರ ತತ್ವದಡಿಯಲ್ಲಿ ಎಲ್ಲರೂ ಕಾರ್ಯನಿರ್ವಹಿಸಿದಾಗ ಸಂಘಸಂಸ್ಥೆಗಳು ಉತ್ತಮ ಅಭಿವೃದ್ದಿ ಕಾಣಲು ಸಾಧ್ಯವಾಗುತ್ತದೆ ಎಂದು ಕಲ್ಪವೃಕ್ಷ ಕ್ರೇಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಹಾಗೂ ಮೈಸೂರು ನಗರಪಾಲಿಕೆ ಸದಸ್ಯ ಪಿ.ಪ್ರಶಾಂತ್ಗೌಡ ತಿಳಿಸಿದರು.
ಪಟ್ಟಣದ ಕಲ್ಪವೃಕ್ಷ ಕ್ರೇಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ 2017ನೇ ಇಸವಿಯ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು. ಯಾವುದೆ ವ್ಯಕ್ತಿ ಅಥವಾ ಸಂಸ್ಥೆ ತಾನು ಬೆಳವಣಿಗೆಯಾಗುವುದರೊಂದಿಗೆ ಇತರರನ್ನು ಬೆಳೆಸುತ್ತಾ ಸಾಗಬೇಕು. ಸಮುದಾಯದ ಅಭಿವೃದ್ದಿಯಾದಾಗ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಸಂಘಸಂಸ್ಥೆಗಳು ಕಾರ್ಯನಿರ್ವಹಿಸಬೇಕು. ವೈಯುಕ್ತಿಕ ಲಾಭಗಳನ್ನು ಬದಿಗಿಟ್ಟು ಸಾಮಾಜಿಕ ನ್ಯಾಯದ ಪರಿಕಲ್ಪನೆ ಅಡಿಯಲ್ಲಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಕುವೆಂಪು ತತ್ವದಡಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಸ್. ಕೃಷ್ಣೇಗೌಡ, ನಿರ್ದೇಶಕರಾದ ಬಿ.ಎ. ಪ್ರಕಾಶ್, ಸಿ.ಆರ್. ದೇವರಾಜು, ಎಸ್.ಆರ್. ದಿನೇಶ್, ಕೆ.ಎಲ್. ಸುರೇಶ್, ಜಿ.ಎಂ. ಧನಂಜಯ, ಎ.ಪಿ. ದಿನೇಶ್ಕುಮಾರ್, ಕೆ.ಎನ್. ನಟೇಶ್, ಡಿ.ಆರ್. ಶಾಬಾಜ್, ಶೃತಿಮಂಜುನಾಥ್, ಅನುದಿನೇಶ್, ರೇಖಾ ಹರೀಶ್, ಮುಖ್ಯ ನಿರ್ವಹಣಾಧಿಕಾರಿ ಜಿ.ಎಸ್.ನಳಿನಾ, ಸಹ ಕಾರ್ಯನಿರ್ವಹಣಾಧಿಕಾರಿ ಆರ್.ಮಂಜುನಾಥ್, ಸೇರಿದಂತೆ ಮತ್ತಿತರರು ಹಾಜರಿದ್ದರು.