ಸುದ್ದಿ ಸಂಕ್ಷಿಪ್ತ

ಸೆ.17ರಂದು ಕೂದಲಿನ ಸಮಸ್ಯೆ ಹಾಗೂ ಲೀಚ್ ಥೆರಪಿ

ಮೈಸೂರು,ಸೆ.15 : ಆಲನಹಳ್ಳಿಯ ಲಲಿತಾದ್ರಿ ಪುರ ರಸ್ತೆಯಲ್ಲಿರುವ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ಸೆ.17ರಂದು ಕೂದಲು ಉದುರುವಿಕೆ, ಕೂದಲು ಬಿಳಿಯಾಗುವುದು ಮತ್ತು ತಲೆಹೊಟ್ಟು ಮುಂತಾದ ತೊಂದರೆಗಳಿಗೆ ವಿಶೇಷ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ.

ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ವರೆಗೆ ಶಿಬಿರ ನಡೆಯಲಿದ್ದು ತಜ್ಞ ವೈದ್ಯರು ಸಲಹೆ ನೀಡಲಿದ್ದಾರೆ.

ಲೀಚ್ ಥೆರಪಿ :

ಮಧುಮೇಹ, ಊದಿಕೊಂಡ ರಕ್ತನಾಳದಿಂದ ವಾಸಿಯಾಗದ ಗಾಯ, ಇಸುಬು ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ‘ಲೀಚ್ (ಜಿಗುಣೆ)ಥೆರಪಿ’ಯನ್ನು ಸೆ.17 ರಿಂದ 22ರವರೆಗೆ ಬೆಳಗ್ಗೆ 9 ರಿಂದ 4ರವರೆಗೆ ಏರ್ಪಡಿಸಲಾಗಿದೆ. ವಿವರಗಳಿಗೆ ದೂ.ಸಂ. 0821 2548231, 2548433 ಸಂಪರ್ಕಿಸಬಹುದಾಗಿದೆ ಎಂದು ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.  (ಕೆ.ಎಂ.ಆರ್)

Leave a Reply

comments

Related Articles

error: