ಮೈಸೂರು

ಕಳಪೆ ಪಡಿತರದಿಂದ ಆರೋಗ್ಯಕ್ಕೆ ಹಾನಿ; ಪಡಿತರ ಕಾರ್ಡ್‍ದಾರರ ಹಿತರಕ್ಷಣಾ ವೇದಿಕೆ ಕಳವಳ

ಪಿರಿಯಾಪಟ್ಟಣ: ಇತ್ತೀಚಿನ ದಿನಗಳಲ್ಲಿ ರಾಜ್ಯ ಸರಕಾರ ನೀಡುತ್ತಿರುವ ಪಡಿತರ ಆಹಾರ ಕೆಳಮಟ್ಟದ್ದಾಗಿದೆ ಎಂದು ಕರ್ನಾಟಕ ನಾಗರಿಕ ಆಹಾರ ಮತ್ತು ರೇಷನ್‌ಕಾರ್ಡ್‌ದಾರರ ಹಿತರಕ್ಷಣಾ ವೇದಿಕೆ ಪ್ರಾದೇಶಿಕ ಅಧ್ಯಕ್ಷೆ ಡಾ.ಪುಷ್ಪಶಂಭುಕುಮಾರ್ ತಿಳಿಸಿದರು.

ತಾಲೂಕಿನ ನಂದಿನಾಥಪುರ ಗ್ರಾಮದಲ್ಲಿ ಕರ್ನಾಟಕ ನಾಗರಿಕ ಆಹಾರ ಮತ್ತು ರೇಷನ್‌ಕಾರ್ಡ್‌ದಾರರ ಹಿತರಕ್ಷಣಾ ವೇದಿಕೆ ವತಿಯಿಂದ ಕುಂದುಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆ ಮಾಡಲಾಗುತ್ತಿರುವ ಉಪ್ಪಿನ ಗುಣಮಟ್ಟ ತೀರಾ ಕೆಳಮಟ್ಟದ್ದಾಗಿದ್ದು ಇದನ್ನು ಉಪಯೋಗಿಸಿದರೆ ರೋಗ ಹರಡುವ ಸಂಭವವಿದೆ. ಈನಿಟ್ಟಿನಲ್ಲಿ ರಾಜ್ಯ ಸರಕಾರ ಹೆಚ್ಚು ಕ್ರಮವಹಿಸಬೇಕು. ಪಡಿತರದಾರರಿಗೆ ಗ್ಯಾಸ್ ಸಂಪರ್ಕವಿದ್ದರೆ ಸೀಮೆಎಣ್ಣೆ ನೀಡುವುದಿಲ್ಲ ಎಂಬ ವಾದ ಸರಿಯಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಅರ್ಧದಿನ ಮಾತ್ರ ಇರುತ್ತದೆ. ಇಂತಹ ಸಂದರ್ಭದಲ್ಲಿ ದೀಪಗಳನ್ನು ಉರಿಸಲು ಮತ್ತಿತರ ಕೆಲಸಗಳಿಗೆ ಸೀಮೆಎಣ್ಣೆ ಅತ್ಯಾವಶ್ಯಕವಾಗಿದೆ. ಆದ್ದರಿಂದ ಶೀಘ್ರದಲ್ಲೆ ಪಡಿತರದಾರರಿಗೆ ಸೀಮೆಎಣ್ಣೆ ನೀಡಬೇಕು ಎಂದು ಆಗ್ರಹಿಸಿದರು.

ಉಪ್ಪಿನ ತೊಂದರೆ ಮತ್ತು ಪಡಿತರದಾರರು ಆಧಾರ್ ಲಿಂಕ್ ಮಾಡಿಸಬೇಕೆಂಬ ಬಗ್ಗೆ ಕುಂದು ಕೊರತೆಯ ಸಭೆಯಲ್ಲಿ ಚರ್ಚಿಸಲಾಯಿತು. ಹಲವಾರು ಅಧಿಕಾರಿಗಳು ಆಧಾರ್ ಲಿಂಕ್ ಮಾಡಿಸುವ ಬಗ್ಗೆ ಸರಿಯಾದ ಪ್ರಚಾರ ಕೈಗೊಳ್ಳದೆ ಏಕಾಏಕಿ ಪಡಿತರ ನಿಲ್ಲಿಸಿರುವುದು ಖಂಡನೀಯ. ಈ ಬಗ್ಗೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಮನವಿ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ನಾಗರಿಕ ಆಹಾರ ಮತ್ತು ರೇಷನ್‌ಕಾರ್ಡ್‌ದಾರರ ಹಿತರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಎಸ್.ರಾಜ್, ಸದಸ್ಯರಾದ ಕೆ.ಆರ್. ವಿದ್ಯಾಸಾಗರ್, ಷರೀಫಾ, ಅನಿಲ್‌ಕುಮಾರ್, ವೃಷಭೇಂದ್ರ, ಮಹದೇಶ್, ರಾಜಶೇಖರ್, ಗ್ರಾಮಸ್ಥರಾದ ಪುಟ್ಟಮಾದಪ್ಪ, ಚಂದ್ರಪ್ಪ, ರಘು, ಶೋಭಾ, ತಿಮ್ಮಮ್ಮ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

comments

Related Articles

error: