ಸುದ್ದಿ ಸಂಕ್ಷಿಪ್ತ

ಮಾರಾಟಮೇಳ: ಅರ್ಜಿ ಸಲ್ಲಿಸಿ

 ಮೈಸೂರು,ಸೆ.15-ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಅಕ್ಟೋಬರ್ 10 ರಿಂದ 14 ರವರೆಗೆ ಮಹಿಳಾ ದಸರಾ-2018 ಪ್ರಯುಕ್ತ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಏರ್ಪಡಿಸಲಾಗಿದೆ.

ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸ್ತ್ರೀಶಕ್ತಿ ಸ್ವ ಸಹಾಯ ಗುಂಪುಗಳು, ಸದಸ್ಯರು, ಸ್ತ್ರೀಶಕ್ತಿ ಒಕ್ಕೂಟಗಳು, ಮಹಿಳಾ ಉದ್ಯಮಿಗಳಿಂದ ತಯಾರಿಸಿದ ವಿಶೇಷ ಗೃಹಪಯೋಗಿ  ಕರಕುಶಲ ವಸ್ತುಗಳು, ಗುಣಮಟ್ಟದ ಪೇಯಿಂಟಿಂಗ್ಸ್ಗಳು, ವಿಶೇಷ ಕೈ ಕಸೂತಿ/ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶಿಸಲು ಇಚ್ಛಿಸುವ ಮಹಿಳಾ ಉದ್ಯಮಿಗಳು ಸ್ತ್ರೀಶಕ್ತಿ ಗುಂಪುಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಇಲಾಖೆಯಿಂದ ರಚಿಸಲ್ಪಟ್ಟ ಸ್ತ್ರೀಶಕ್ತಿ ಗುಂಪುಗಳು, ಉದ್ಯೋಗಿನಿ, ಕಿರುಸಾಲ ಮತ್ತು ಮಹಿಳಾ ತರಬೇತಿ ಯೋಜನೆಯ ಪ್ರಯೋಜನ ಪಡೆದ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ಭಾಗವಹಿಸಲು ಇಚ್ಛಿಸುವ ಸ್ತ್ರೀಶಕ್ತಿ ಗುಂಪುಗಳ ಸದಸ್ಯರು/ ಮಹಿಳಾ ಉದ್ಯಮಿಗಳು ಪ್ರದರ್ಶಿಸುವ ಉತ್ಪನ್ನಗಳು/ವಸ್ತುಗಳನ್ನು ಕುರಿತು ಸೆ.25 ರೊಳಗೆ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ದೃಢೀಕರಣದೊಂದಿಗೆ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರು ರವರಿಗೆ ಅರ್ಜಿಯನ್ನು ಸಲ್ಲಿಸುವುದು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಸ್ತು ಪ್ರದರ್ಶನದ ಮಳಿಗೆಯಲ್ಲಿ ಪ್ರದರ್ಶಿಸುವ ವಸ್ತುಗಳನ್ನು ಆಯ್ಕೆ ಮಾಡಲು ಸೆ.28 ರಂದು ಮಧ್ಯಾಹ್ನ 2 ಗಂಟೆಗೆ ಸ್ತ್ರೀಶಕ್ತಿ ಭವನ ವಿಜಯನಗರ 2ನೇ ಹಂತದಲ್ಲಿ ಸಿದ್ಧಪಡಿಸಿದ ಸ್ಯಾಂಪಲ್ ವಸ್ತುಗಳನ್ನು ತರಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ: ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಭಿವೃದ್ಧಿ ನಿರೀಕ್ಷಕರ ತಾತ್ಕಲಿಕ ದೂರವಾಣಿ ಸಂಖ್ಯೆ: 7892840307, ಸಂಪನ್ಮೂಲ ಸಲಹೆಗಾರರ ದೂರವಾಣಿ ಸಂಖ್ಯೆ: 8722861262 ಕಛೇರಿ ಸಹಾಯಕರ ದೂರವಾಣಿ ಸಂಖ್ಯೆ: 9590099951, ಹಾಗೂ ಖುದ್ದು ಕಚೇರಿಯ ವೇಳೆಯಲ್ಲಿ ಬೆಳಿಗ್ಗೆ 10.30 ರಿಂದ 5 ರವರೆಗೆ ಸಂಪರ್ಕಿಸಬಹುದಾಗಿದೆ. (ಎಂ.ಎನ್)

Leave a Reply

comments

Related Articles

error: