ಮೈಸೂರು

ಹುಲಿ ನರಭಕ್ಷಕ ಎನ್ನುವುದು ತಪ್ಪು ಕಲ್ಪನೆ: ಪರಿಸರ ತಜ್ಞ ರಾಜಕುಮಾರ್

ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಮೈಸೂರ್ ಸೈನ್ಸ್ ಫೌಂಡೇಶನ್ ವತಿಯಿಂದ ಶನಿವಾರ ಗಡಿಗಳಿಲ್ಲದ ಕಾಡು ಪ್ರಾಣಿಗಳ ಜೀವನ ವಿಷಯದ ಕುರಿತು ವಿಶೇಷ ಉಪನ್ಯಾಸ ನಡೆಯಿತು.

ವೈಲ್ಡ್ ಲೈಫ್ ಕನ್ಸರ್ವೇಷನ್ ಫೌಂಡೇಷನ್ ಪರಿಸರ ತಜ್ಞ ರಾಜಕುಮಾರ್ ದೇವರಾಜೇ ಅರಸ್ ವಿಶೇಷ  ಉಪನ್ಯಾಸವನ್ನು ನೀಡಿದರು. ಪ್ರಾಣಿಗಳಿಗೆ ಅದರದ್ದೇ ಆದ ಒಂದು ಗಡಿಯಿಲ್ಲ. ಅವು ಎಲ್ಲ ಕಡೆಗಳಿಂದಲೂ ಬರುತ್ತದೆ. ಕೇರಳಗಳ ಗಡಿಗಳನ್ನು ದಾಟಿಯೂ ಇಲ್ಲಿಗೆ ಪ್ರಾಣಿಗಳು ಬರುತ್ತವೆ ಎಂದರು.

ಹುಲಿಯನ್ನು ನರಭಕ್ಷಕ ಪ್ರಾಣಿ ಎಂದು ವರದಿ ಮಾಡಲಾಗುತ್ತದೆ. ಆದರೆ ಎಲ್ಲಿಯೂ ಹುಲಿ ಮನುಷ್ಯನನ್ನು ತಿಂದ  ಉದಾಹರಣೆಗಳಿಲ್ಲ. ಮನುಷ್ಯನನ್ನು ಕೊಲ್ಲುತ್ತದೆ ಆದರೆ ಭಕ್ಷಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕೆಲವರು ಕಾಡುಪ್ರಾಣಿಗಳನ್ನು ಸುಮ್ಮ ಸುಮ್ಮನೆ ಕೆಣಕುತ್ತಾರೆ. ಅದು ಸರಿಯಲ್ಲ. ಕೆಣಕುವುದರಿಂದಲೇ ಅವು ನಮ್ಮ ಮೇಲೆ ಎರಗುತ್ತವೆ ಎಂದು ತಿಳಿಸಿದರು.

ಪ್ರಾಣಿಗಳೊಂದಿಗಿನ ಅವರ 10-15 ವರ್ಷಗಳ ಅನುಭವವನ್ನು ಹಂಚಿಕೊಂಡರು.

ವನ್ಯ ಪ್ರಾಣಿಗಳ ಕುರಿತಾಗಿದ್ದ ತಮ್ಮ ಭಯವನ್ನು ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಈ ಸಂದರ್ಭ ಹೋಗಲಾಡಿಸಿಕೊಂಡರು.

Leave a Reply

comments

Related Articles

error: