ಸುದ್ದಿ ಸಂಕ್ಷಿಪ್ತ

ಸೆ.17ರಂದು ‘ಕವಿ-ವಿಜ್ಞಾನಿ ತುಲನೆ’ : ಉಪನ್ಯಾಸ

ಮೈಸೂರು,ಸೆ.15 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ವಿಜ್ಞಾನ ಪರಿಷತ್ತು ಸಂಯುಕ್ತವಾಗಿ ವಿಜ್ಞಾನ ಸಾಹಿತ್ಯ ಸಂಜೆ ‘ಕವಿ – ವಿಜ್ಞಾನಿ’ ಒಂದು ತುಲನೆ ಉಪನ್ಯಾಸವನ್ನು ಸೆ.17ರ ಸಂಜೆ 5 ಗಂಟೆಗೆ ಅರಮನೆ ಉತ್ತರದ್ವಾರದ ಕಸಾಪ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಂ.ಆರ್.ನಾಗರಾಜ್ ಉದ್ಘಾಟಿಸಿ ವಿಷಯ ಮಂಡಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಅಧ್ಯಕ್ಷ ಎನ್.ಎಂ.ಶಿವಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: