ಸುದ್ದಿ ಸಂಕ್ಷಿಪ್ತ

ದಕ್ಷಿಣ ಕಾಶಿ ವಿಪ್ರ ಮಹಾಸಭಾದ ಅಧ್ಯಕ್ಷರಾಗಿ ಇಳೈ ಆಳ್ವಾರ್ ಸ್ವಾಮೀಜಿ ಆಯ್ಕೆ

ಮೈಸೂರು,ಸೆ.15 : ದಕ್ಷಿಣ ಕಾಶಿ ವಿಪ್ರ ಮಹಾಸಭಾದ  ಅಧ್ಯಕ್ಷರಾಗಿ ಮೇಲುಕೋಟೆ ವಂಗೀಪುರ ನಂಬಿಮಠದ ಬಿ.ವಿ.ಇಳೈಆಳ್ವಾರ್ ಸ್ವಾಮೀಜಿ, ಕಾರ್ಯದರ್ಶಿಯಾಗಿ ಕೆ.ಸುರೇಶ್ ಇವರುಗಳು ನೂತನವಾಗಿ ಆಯ್ಕೆಯಾಗಿದ್ದಾರೆ.

ಈಚೆಗೆ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ ಗೌರವಾಧ್ಯಕ್ಷರಾಗಿ ಕೆ.ಆರ್.ಮೋಹನ್ ಕುಮಾರ್, ಉಪಾಧ್ಯಕ್ಷರಾಗಿ ಡಾ.ಕೆ.ರಘುರಾಮ್ ವಾಜಪೇಯಿ, ಸಹಕಾರ್ಯದರ್ಶಿಯಾಗಿ ನಂಜುಂಡಸ್ವಾಮಿ ಘನಪಾಠಿ, ನಿರ್ದೇಶಕರಾಗಿ ಸತ್ಯ ಪ್ರಕಾಶ್, ಸಂಪತ್ ಕುಮಾರ್, ಡಾ.ಕಾಂತರಾಜಗೋಪಾಲ್, ಪದ್ಮಜ, ಬಿ.ಎನ್.ರಾಮಚಂದ್ರ, ನೇತ್ರಾವತಿ, ಬಿ.ಎನ್. ಕಿರಣ್ ಇವರುಗಳು ಆಯ್ಕೆಯಾಗಿರುವುದಾಗಿ ಕಾರ್ಯದರ್ಶಿ ಬಿ.ಎನ್.ನರಸಿಂಹ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: