ಮೈಸೂರು

ಶಾಂತಿ ಸಂದೇಶ ಸಾರಿದ ಕ್ರಿಸ್ತನ ಜನುಮ ದಿನದ ಸಂಭ್ರಮ

%e0%b2%ab%e0%b2%beಭಾರತೀಯ ಕ್ರೈಸ್ತರಿಗೆ ವರ್ಷದಲ್ಲಿ ಬರುವ  ಒಂದೇ ಒಂದು ಸಡಗರದ ಹಬ್ಬ ಕ್ರಿಸ್ಮಸ್. ಶಾಂತಿ, ಪ್ರೀತಿ, ಕರುಣೆ, ಸಮಾಧಾನ, ಏಕತೆ, ಸೌಹಾರ್ದತೆ, ಸಮಾನತೆಯ ಸಂದೇಶ ನೀಡಿದ  ಏಸುಕ್ರಿಸ್ತರ ಜನ್ಮದಿನ.

ಕ್ರಿಸ್ಮಸ್ ಹಬ್ಬದಂದು ಕ್ರೈಸ್ತರು ಮನೆಗಳಿಗೆ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಾರೆ. ಕ್ರಿಸ್ಮಸ್ ಟ್ರೀ, ಬಲೂನ್, ಸಾಂತಾಕ್ಲಾಸ್, ಗ್ರೀಟಿಂಗ್ ಕಾರ್ಡ್ ನಿಂದ ಮೆರಗು ನೀಡುತ್ತಾರೆ.

ಮೈಸೂರಿನಲ್ಲಿಯೂ ಕ್ರೈಸ್ತ ಸಮುದಾಯದವರು ಕ್ರಿಸ್ಮಸ್ ಹಬ್ಬದ ತಯಾರಿ ನಡೆಸಿದ್ದಾರೆ. ಶಾಸಕ ಎಂ.ಕೆ. ಸೋಮಶೇಖರ್ ಅವರು ತಮ್ಮ ಬೆಂಬಲಿಗರೊಂದಿಗೆ ತೆರಳಿ ಮೈಸೂರು ಪ್ರಾಂತ್ಯದ ಕ್ರೈಸ್ತ ಧರ್ಮಗುರು ರೆ.ಫಾ. ಥಾಮಸ್ ವಾಜಪಿಳ್ಳೈ ಅವರನ್ನು ಭೇಟಿ ಮಾಡಿ ಕ್ರಿಸ್ಮಸ್ ಶುಭಾಶಯ ಕೋರಿದರು.

%e0%b2%95%e0%b3%8d%e0%b2%b0%e0%b2%bf-1ರವಿವಾರ ಡಿ.25ರಂದು ಕ್ರಿಸ್ಮಸ್ ಹಬ್ಬ ನಡೆಯಲಿದ್ದು,  ಏಸು ಕ್ರಿಸ್ತನ ಜನನದ ದ್ಯೋತಕವಾಗಿ ಗೋದಲಿಗಳನ್ನು ಸಿದ್ಧಪಡಿಸಲಾಗಿದ್ದು, ಬಣ್ಣಬಣ್ಣದ ವಿದ್ಯುದ್ದೀಪಗಳಿಂದ ಸಿಂಗರಿಸಲಾಗಿದೆ. ಚರ್ಚ್ ಗಳೂ ನವವಧುವಿನಂತೆ ಸಿಂಗಾರಗೊಂಡಿದ್ದು. ಶನಿವಾರ ಸಂಜೆ ಪೂಜೆ ನೆರವೇರಿತು.

Leave a Reply

comments

Related Articles

error: