ಪ್ರಮುಖ ಸುದ್ದಿ

ಖಾಸಗಿ ಬಸ್ ದ್ವಿ ಚಕ್ರ ವಾಹನ‌ ನಡುವೆ ಮುಖಾಮುಖಿ ಡಿಕ್ಕಿ : ಸವಾರ ಸಾವು

ರಾಜ್ಯ(ಚಿಕ್ಕಬಳ್ಳಾಪುರ),ಸೆ.16:- ಖಾಸಗಿ ಬಸ್ ದ್ವಿ ಚಕ್ರ ವಾಹನ‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ  ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚಾಕವೇಲು ಬಿಳ್ಳೂರು ಮಾರ್ಗದ ರಸ್ತೆಯಲ್ಲಿ ನಡೆದಿದೆ.

ಮೃತನನ್ನು ಬಾಗೇಪಲ್ಲಿ ತಾಲೂಕಿನ ಗಡ್ಡಂಪಲ್ಲಿ ಗ್ರಾಮದ ಸುರೇಶ್ (  32) ಎಂದು ಗುರುತಿಸಲಾಗಿದೆ. ಘಟನೆಯಿಂದ  ರೊಚ್ಚಿಗೆದ್ದ ಸಾರ್ವಜನಿಕರು ಬಸ್ ಗಾಜನ್ನು ಜಖಂಗೊಳಿಸಿದ್ದಾರೆ. ಬಸ್ ಚಾಲಕ  ಬಸ್ ಬಿಟ್ಟು ಪರಾರಿಯಾಗಿದ್ದಾನೆ.   ಚೇಳೂರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: