ಮೈಸೂರು

ಜಗನ್ಮೋಹನ ಅರಮನೆ ದುರಸ್ಥಿ ಕಾರ್ಯ ಪರಿಶೀಲಿಸಿದ ರಾಜಮಾತೆ ಪ್ರಮೋದಾದೇವಿ ಒಡೆಯರ್ : ರಾಜಕೀಯ ಸೇರುವ ಸಂದರ್ಭ ಬಂದರೆ ಖಂಡಿತ ತಿಳಿಸುತ್ತೇನೆ

ಮೈಸೂರು,ಸೆ.16:- ಮೈಸೂರಿನ ಜಗನ್ಮೋಹನ ಅರಮನೆ ದುರಸ್ಥಿ ಕಾರ್ಯ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ದುರಸ್ಥಿ ಕಾಮಗಾರಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಅವರು ಶತಮಾನಕ್ಕೂ ಮಿಗಿಲಾದ ಇತಿಹಾಸವನ್ನು ಹೊಂದಿರುವ ಜಗನ್ಮೋಹನ ಅರಮನೆ ಇದಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಶಿಥಿಲಾವಸ್ಥೆ ತಲುಪಿತ್ತು. ಕಟ್ಟಡದ ಮೇಲ್ಛಾವಣಿಯ ಗಾರೆ ಉದುರಿ ಬೀಳಲಾರಂಭಿಸಿತ್ತು. ಹಾಗಾಗಿ ನವೀಕರಣ ಮಾಡಲು ಮುಂದಾಗಿದ್ದೇವೆ. ಇದೇ ಸೆಪ್ಟೆಂಬರ್ 30ರಳಗೆ ದುರಸ್ಥಿ ಕಾರ್ಯ ಮುಗಿಸಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲು ಉದ್ದೇಶಿಸಲಾಗಿತ್ತು. ಅಷ್ಟರಲ್ಲಿ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯವಿಲ್ಲ. ಹಾಗಾಗಿ ದಸರಾ ಮಹೋತ್ಸವಕ್ಕೂ ಒಂದು ವಾರ ಮುಂಚಿತವಾಗಿ ಜಗನ್ಮೋಹನ ಅರಮನೆಯನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು ಎಂದರು.

ಜಗನ್ಮೋಹನ ಅರಮನೆ ದುರಸ್ತಿಗೆ ಸರ್ಕಾರದಿಂದ ಯಾವುದೇ ರೀತಿಯ ನೆರವು ಪಡೆದುಕೊಂಡಿಲ್ಲ.ಜಗನ್ಮೋಹನ ಅರಮನೆ ಟ್ರಸ್ಟ್ ಹಣದಿಂದ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಬರುವ 2019ಕ್ಕೆ ನನ್ನ ಮಾವ ಜಯಚಾಮರಾಜ ಒಡೆಯರ್ ಅವರ 100ನೇ ವರ್ಧಂತಿ ಮಹೋತ್ಸವವಿದೆ. ಅದರ ನೆನಪಿಗಾಗಿ ಜಗನ್ಮೋಹನ ಅರಮನೆಯನ್ನು ದುರಸ್ಥಿ ಮಾಡಿ ನವೀಕೃತ ಅರ್ಪಣೆ ಮಾಡಲಾಗುತ್ತಿದೆ. ಜಗನ್ಮೋಹನ ಅರಮನೆಗೆ ಸಂಬಂಧಸಿದಂತೆ ನ್ಯಾಯಾಲಯದಲ್ಲಿ ಸರ್ಕಾರ ಮತ್ತು ರಾಜಮನೆತನದ ನಡುವೆ ಯಾವುದೇ ವ್ಯಾಜ್ಯವಿಲ್ಲ. ಮುಂದೆ ಬಂದರೂ ಬರಬಹುದು. ನಮಗೂ ನ್ಯಾಯಾಲಯಕ್ಕೂ ಬಿಡಿಸಲಾಗದ ನಂಟಿದೆ ಎಂದು ನಗೆ ಚಟಾಕಿ ಹಾರಿಸಿದರು.ಜಗನ್ಮೋಹನ ಅರಮನೆಯಲ್ಲಿ ಮೈಸೂರು ರಾಜಮನೆತನದ ನಾಲ್ಕು ತಲೆಮಾರುಗಳಿಗೆ ಸೇರಿದ ವಸ್ತುಗಳಿವೆ. ಮುಂಬರುವ ದಸರಾ ಮಹೋತ್ಸವದಲ್ಲಿ ಪ್ರತಿ ವರ್ಷದಂತೆ ಖಾಸಗಿ ದರ್ಬಾರು ನಡೆಯಲಿದೆ ಎಂದರು. ನಾನು ರಾಜಕೀಯ ಸೇರುವುದಿಲ್ಲ.ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ. ರಾಜಕೀಯ ಸೇರುವ ಸಂದರ್ಭ ಬಂದರೆ ಖಂಡಿತ ತಿಳಿಸುತ್ತೇನೆ. ಯದುವೀರ್ ರಾಜಕೀಯ ಸೇರುವ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅದು ಅವರ ವೈಯುಕ್ತಿಕ ವಿಚಾರ. ಪಾರಂಪರಿಕ ದಸರಾ ಎಂದು ಕರೆಯುವುದು ಸರಿಯಲ್ಲ. ಸರ್ಕಾರ ನಾಡಹಬ್ಬವೆಂದು ದಸರಾ ಆಚರಿಸುತ್ತಿದೆ. ರಾಜಮನೆತನ ದಸರಾವನ್ನು ನವರಾತ್ರಿಯನ್ನಾಗಿ ಆಚರಿಸುತ್ತಿದೆ ಎಂದು ಹೇಳಿದರು.

ದಸರಾ ಸಂದರ್ಭದಲ್ಲಿ ರಾಜಮನೆತನಕ್ಕೆ ರಾಜ್ಯ ಸರ್ಕಾರ ಗೌರವಧನ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು ಈ ಬಗ್ಗೆ ಸುಪ್ರೀಂ ಕೋರ್ಟ್ ವರೆಗೆ ಹೋಗಿದ್ದವರಿಗೆ ನ್ಯಾಯಾಲಯವೇ ಉತ್ತರ ನೀಡಿದೆ. ಚಿನ್ನದ ಅಂಬಾರಿ ಖಾಸಗಿ ಸ್ವತ್ತಾಗಿದೆ. ಚಿನ್ನದ ಅಂಬಾರಿ ಈಗಲೂ ರಾಜಮನೆತನದ ಸುಪರ್ದಿಯಲ್ಲಿದೆ.ಇಡೀ ಅರಮನೆಯೇ ಖಾಸಗಿ ಸ್ವತ್ತಾಗಿದೆ. ಅರಮನೆ ಒಡೆತನದ ವ್ಯಾಜ್ಯ ನ್ಯಾಯಾಲಯದಲ್ಲಿದೆ. ಆದರೂ ಈ ವಿಚಾರದಲ್ಲಿ ಮುಂದೆ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ನುಡಿದರು. ಸರ್ಕಾರದಿಂದ ರಾಜಮನೆತನಕ್ಕೆ ಗೌರ ಸಹಾಯಧನ ನೀಡುವ ವಿಚಾರ. ಈ ವಿಚಾರವನ್ನು ಯಾರು ಮಾತಾಡಿದ್ದಾರೆ ಅಂತ ನಿಮಗೂ ಗೊತ್ತು ನನಗೂ ಹೊತ್ತು. ನಾನು ಅಂತ ವಿಚಾರ ಹಾಗೂ ಅವರ ಬಗ್ಗೆ ಮಾತನಾಡೋಲ್ಲ.ಅಂಬಾರಿ ವಿಚಾರಕ್ಕೆ ಕೋರ್ಟ್ ನಲ್ಲಿ ಒಬ್ಬರು ಕೇಸ್ ಹಾಕಿದ್ದರು. ಅದು ಕೋರ್ಟ್ ನಲ್ಲೂ ಸಹ ಪ್ರೂ ಆಗಿದೆ ಅಂಬಾರಿ ನಮ್ಮ ಖಾಸಗಿ ಆಸ್ತಿ ಅಂತ. ಅಂಬಾರಿ ನಮ್ದೆ ಈಗಲೂ ನಮ್ಮದೆ ಮುಂದೆಯೇ ನಮ್ಮದೆ. ಅಂಬಾರಿಗೆ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳು ನಮ್ಮ ಬಳಿಯಿದೆ.ಅಂಬಾರಿ ಇರುವ ಸ್ಟ್ರಾಂಗ್ ರೂಂ ಕೀ ಸಹ ನಮ್ಮಲೇ ಇದೆ. ಭದ್ರತೆ ದೃಷ್ಟಿಯಿಂದ ಅಲ್ಲಿ ಇಡಲಾಗಿದೆ ಎಂದರು. ದಸರಾ 2018 ಕ್ಕೆ ಅರಮನೆ ಸಹಯೋಗದಲ್ಲಿ ಬೊಂಬೆ ಪ್ರದರ್ಶನ. ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಇದೇ ಮೊದಲ ಬಾರಿಗೆ ಆಯೋಜನೆ ಗೊಳ್ಳಲಿರುವ ಕಾರ್ಯಕ್ರಮ ಗಾಯತ್ರಿ ಸೇವಾ ಟ್ರಸ್ಟ್ ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ದಸರಾ ದಲ್ಲಿ ಗೊಂಬೆ ಪ್ರದರ್ಶನ ನಡೆಯಲಿದೆ. ಆಂಧ್ರಪ್ರದೇಶದ ಎನ್ ಜಿ ಒ ವತಿಯಿಂದ  ರಾಷ್ಟ್ರಾದ್ಯಂತ ಸಿಗುವ ಗೊಂಬೆಗಳ  ಪ್ರದರ್ಶನ ರಾಮಾಯಣ, ಮಹಾಭಾರತ, ವಿವಿಧ ಸಂಸ್ಕೃತಿಗಳ ಅನಾವರಣಗೊಳಿಸುವ ಗೊಂಬೆಗಳು ಇರಲಿವೆ. ಒಂದು ಲಕ್ಷ ಬೊಂಬೆಗಳು ಪ್ರದರ್ಶನದಲ್ಲಿರಲಿವೆ. ಅದಕ್ಕೆ ಕಡಿಮೆ ದರದಲ್ಲಿ ಟಿಕೇಟ್ ಸಹ ನಿಗದಿಪಡಿಸಲಾಗುತ್ತದೆ ಎಂದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: