ಪ್ರಮುಖ ಸುದ್ದಿ

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಐರಾವತ ಬಸ್ಸು ಮತ್ತು ಕಾರು ನಡುವೆ ಡಿಕ್ಕಿ : ಮಹಿಳೆ ಸಾವು

ರಾಜ್ಯ(ಮಂಡ್ಯ)ಸೆ.17:-ಮದ್ದೂರು ಸಮೀಪದ ರುದ್ರಾಕ್ಷಿಪುರದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಐರಾವತ ಬಸ್ಸು ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಓರ್ವ ಮಹಿಳೆ ಮೃತಪಟ್ಟು ನಾಲ್ಕು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಘಟನೆಯಲ್ಲಿ ಮೈಸೂರಿನ ಕೆ.ಸಿ.ಲೇಔಟ್ ಕಾಳಯ್ಯ ಅವರ ಪತ್ನಿ ಸುಕನ್ಯಾ (40) ಮೃತಪಟ್ಟಿದ್ದು, ಕಾರಿನ ಚಾಲಕ ವಾಸುದೇವ, ಇಟ್ಟಮಾಡು ಗ್ರಾಮದ  ಗ್ರಾಮದ ಬೋರಯ್ಯ ಅವರ ಪತ್ನಿ ಕಮಲಮ್ಮ, ಹೇಮಂತ್, ಬೋರಯ್ಯ ಅವರಿಗೆ ತೀವ್ರ ಗಾಯವಾಗಿದೆ. ಇವರು ಮದ್ದೂರಿಗೆ ಬಂದು ವಾಸುದೇವು ಅವರಿಗೆ ಹೆಣ್ಣು ನೋಡಿಕೊಂಡು ಇಟ್ಟಮಾಡು ಗ್ರಾಮಕ್ಕೆ ಹಿಂದುರುಗುತ್ತಿದ್ದ ಸಂದರ್ಭದಲ್ಲಿ ರುದ್ರಾಕ್ಷಿ ಪುರ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರು ಚಾಲಕನ  ಅಜಾಗರೂಕತೆಯ ಚಾಲನೆಯಿಂದ ಐರಾವತ ಬಸ್ಸಿಗೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ.

ಗಾಯಗೊಂಡವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.ಈ ಸಂಬಂಧ ಪಟ್ಟಣದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: