ದೇಶ

ಶಾಲಾ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ ಮೋದಿ

ನವದೆಹಲಿ,ಸೆ.17ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು (ಸೋಮವಾರ) 68ನೇ ಹುಟ್ಟುಹಬ್ಬದ ಸಂಭ್ರಮ. ಮೋದಿ 68ನೇ ಹುಟ್ಟುಹಬ್ಬವನ್ನು ತಮ್ಮ ಲೋಕಸಭೆ ಕ್ಷೇತ್ರವಾದ ವಾರಾಣಾಸಿಯಲ್ಲಿ ಶಾಲಾ ಮಕ್ಕಳ ಜತೆ ಆಚರಿಸಿಕೊಳ್ಳಲಿದ್ದಾರೆ.

ಇಂದು ಮತ್ತು ನಾಳೆ ಪ್ರಧಾನಿಯ ವಾರಾಣಾಸಿ ಭೇಟಿ ನಿಗದಿಯಾಗಿದ್ದು, ಕಾಶಿ ವಿಶ್ವನಾಥ ದೇಗುಲದಲ್ಲಿ ಅವರು ಪ್ರಾರ್ಥನೆ ಸಲ್ಲಿಸಲಿದ್ದಾರೆ. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಬಳಿಕ ಶಾಲಾ ಮಕ್ಕಳ ಜತೆ ಕಾಲ ಕಳೆಯಲಿದ್ದು, ತಮ್ಮದೇ ಜೀವನಚರಿತ್ರೆ ಆಧರಿತ 32 ನಿಮಿಷಗಳ ಚಿತ್ರ’ ಚಲೊ ಜೀತೆ ಹೈ’ವೀಕ್ಷಿಸಲಿದ್ದಾರೆ.

ಇದೇ ವೇಳೆ ಮೋದಿ ಅವರು ಹಲವು ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ. ವಿಶೇಷ ಸ್ವಚ್ಛತಾ ಅಭಿಯಾನ ಮತ್ತು ಆರೋಗ್ಯ ಶಿಬಿರ ಕೂಡ ಉದ್ಘಾಟಿಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: