ಮೈಸೂರು

ಮೋದಿ ಹುಟ್ಟುಹಬ್ಬದ ಪ್ರಯುಕ್ತ: ವಿದ್ಯಾರ್ಥಿಗಳಿಗೆ `ಎಕ್ಸಾಮ್ ವಾರಿಯರ್ಸ್’ ಪುಸ್ತಕ ವಿತರಣೆ

ಮೈಸೂರು,ಸೆ.17-ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 68ನೇ ಹುಟ್ಟುಹಬ್ಬದ ಪ್ರಯುಕ್ತ ನಗರದ ವಿಜಯ ವಿಠಲ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೋದಿ ಅವರು ಬರೆದಿರುವ `ಎಕ್ಸಾಮ್ ವಾರಿಯರ್ಸ್’ ಪುಸ್ತಕವನ್ನು ಸಂಸದ ಪ್ರತಾಪಸಿಂಹ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅತ್ಯಂತ ಆತ್ಮೀಯವಾದ ವ್ಯಕ್ತಿ. ಮಗುವಿನಿಂದ ಹಿಡಿದು ವೃದ್ಧವರೆಗೂ ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪಿರುವ ಏಕಮಾತ್ರ ಪ್ರಧಾನಿಯೆಂದರೆ ಅದು ನರೇಂದ್ರ ಮೋದಿ. ಪರೀಕ್ಷೆ ಬಂದರೆ ಭಯವಾಗುತ್ತೆ. ಪರೀಕ್ಷೆಯನ್ನು ಎದುರಿಸುವುದು ಹೇಗೆ ಎಂದು ವಿದ್ಯಾರ್ಥಿಗಳು ಮೋದಿ ಅವರಿಗೆ ಪ್ರಶ್ನೆ ಕಳುಹಿಸುತ್ತಿದ್ದರು. ಅದಕ್ಕಾಗಿ ಮೋದಿ ಎಕ್ಸಾಮ್ ವಾರಿಯರ್ಸ್ ಎಂಬ ಪುಸ್ತಕವನ್ನು ಬರೆದರು. ಒಂದನೇ ತರಗತಿ ವಿದ್ಯಾರ್ಥಿಯಿಂದ ಹಿಡಿದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಓದಬೇಕಾದ ಪುಸ್ತಕ ಇದು. ಪರೀಕ್ಷೆಯನ್ನು ಯಾವ ರೀತಿ ಎದುರಿಸಬೇಕು ಎಂಬುದನ್ನು ಈ ಪುಸ್ತಕದಲ್ಲಿ ತಿಳಿಸಿಕೊಟ್ಟಿದ್ದಾರೆ. ಈ ಪುಸ್ತಕ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಲಿದೆ ಎಂದರು.

ಶಾಸಕ ಎಲ್.ನಾಗೇಂದ್ರ, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: