ಮೈಸೂರು

ಕಟ್ಟಿಂಗ್ ಮಷಿನ್ ನಿಂದ ಕತ್ತು ಕುಯ್ದು ಆತ್ಮಹತ್ಯೆ

ಜೀವನದಲ್ಲಿ ಜುಗುಪ್ಸೆ ಹೊಂದಿದ ವ್ಯಕ್ತಿಯೋರ್ವ ಕಟ್ಟಿಂಗ್ ಮೆಷಿನ್ ಸಹಾಯದಿಂದ ತನ್ನ ಕತ್ತನ್ನೇ ಕುಯ್ದುಕೊಂಡ ಘಟನೆ ಮೈಸೂರಿನ ತೊಣಚಿಕೊಪ್ಪಲಿನಲ್ಲಿ ನಡೆದಿದೆ.

ತೊಣಚಿಕೊಪ್ಪಲು ನಿವಾಸಿ ಜವರೇಗೌಡ(40) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಪತ್ನಿ ಹಾಗೂ ಮಗಳೊಂದಿಗೆ ತೊಣಚಿಕೊಪ್ಪಲಿನಲ್ಲಿ ವಾಸವಾಗಿದ್ದರು. ಮಾರ್ಬಲ್ಸ್ ಕಟ್ಟಿಂಗ್ ಕೆಲಸ ಮಾಡುತ್ತಿದ್ದ ಅವರು ಮನೆಯಲ್ಲಿ ಎಲ್ಲರ ಬಳಿಯೂ ನಾವೆಲ್ಲ ಸತ್ತೋಗೋಣ ಎಂಬ ಮಾತನ್ನು ಪದೇ ಪದೇ ಆಡುತ್ತಿದ್ದರು ಎನ್ನಲಾಗಿದೆ. ಇವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆ ಇರಲಿಲ್ಲ ಎಂದು ತಿಳಿದುಬಂದಿದೆ.

ಶನಿವಾರ ರಾತ್ರಿ ಮಲಗಿದ್ದ ಮಗಳ ಕತ್ತು ಹಿಸುಕಲು ಹೋದಾಗ ಎದುರಿಗೆ ಬಂದ ಪತ್ನಿ ಅವರನ್ನು ತಡೆದಿದ್ದಾರೆ. ಇದರಿಂದ ನೊಂದ ಜವರೇಗೌಡ ತಾನೇ ಕಟ್ಟಿಂಗ್ ಮಷಿನ್ ನಿಂದ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: