ಮನರಂಜನೆ

ವಿಷ್ಣುದಾದಾ ಮಗಳಿಂದ ಮೇಘನಾ ಪಡೆದುಕೊಂಡ ವಿಶೇಷ ಉಡುಗೊರೆಯೇನು.?

ಬೆಂಗಳೂರು,ಸೆ.17-ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಮಗಳು ಕೀರ್ತಿ ಅವರಿಂದ ನಟಿ ಮೇಘನಾ ರಾಜ್ ಅವರು ವಿಶೇಷ ಉಡುಗೊರೆಯೊಂದನ್ನು ಪಡೆದುಕೊಂಡಿದ್ದು, ಮೇಘನಾ ಅವರ ಖುಷಿಗೆ ಪಾರವೇ ಇಲ್ಲದಂತಾಗಿದೆ.

ಮೇಘನಾ ರಾಜ್ ಪಡೆದುಕೊಂಡ ಆ ವಿಶೇಷ ಉಡುಗೊರೆ ಏನೆಂಬುದಕ್ಕೆ ಇಲ್ಲಿದೆ ಉತ್ತರ. ಮೇಘನಾ ರಾಜ್ ಡಾ.ವಿಷ್ಣುವರ್ಧನ್ ಅವರು ಬಳಸುತ್ತಿದ್ದ ವಾಚ್ ಅನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ.

ಈ ಸಂತಸವನ್ನ ನಟಿ ಮೇಘನಾ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. `ನಾನೀಗ ಜಗತ್ತಿನಲ್ಲೇ ಎತ್ತರಕ್ಕೆ ಇದ್ದೀನಿ ಎಂದು ಭಾಸವಾಗುತ್ತಿದೆ. ವಿಷ್ಣುವರ್ಧನ್ ಅವರ ಮಗಳು ಕೀರ್ತಿ ಅವರಿಂದ ನನಗೆ ವಿಷ್ಣುದಾದಾ ಬಳಸುತ್ತಿದ್ದ ವಾಚ್ ಉಡುಗೊರೆಯಾಗಿ ಸಿಕ್ಕಿದೆ. ಈ ಮಾಸ್ಟರ್ ಪೀಸ್ ಗೆ ಒಡತಿಯಾಗಿರುವುದಕ್ಕೆ ನನಗೆ ಬಹಳ ಹೆಮ್ಮೆಯಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಮೇಘನಾ ರಾಜ್ ಕುಟುಂಬ ಬಹಳ ಹತ್ತಿರ. ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಮತ್ತು ವಿಷ್ಣುವರ್ಧನ್ ಅವರು ಆತ್ಮೀಯ ಸ್ನೇಹಿತರು ಮತ್ತು ಚಿತ್ರರಂಗದಲ್ಲಿ ಒಟ್ಟಾಗಿ ಬೆಳೆದವರು. ಹೀಗಾಗಿ, ಇವರಿಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು.

ಹೀಗಾಗಿ, ಚಿಕ್ಕವಯಸ್ಸಿನಲ್ಲಿ ಮೇಘನಾ ರಾಜ್ ವಿಷ್ಣುವರ್ಧನ್ ಅವರ ಜೊತೆ ಸಮಯ ಕಳೆದಿದ್ದಾರೆ. ಅವರನ್ನ ಭೇಟಿ ಮಾಡಿದ್ದಾರೆ. ಅವರೊಂದಿಗೆ ಮಾತನಾಡಿದ್ದಾರೆ. ಹೀಗಾಗಿ, ವಿಷ್ಣುವರ್ಧನ್ ಅವರಂದ್ರೆ ಮೇಘನಾಗೂ ತುಂಬಾ ಅಭಿಮಾನ ಮತ್ತು ಇಷ್ಟ. (ಎಂ.ಎನ್)

Leave a Reply

comments

Related Articles

error: