ಮೈಸೂರು

ಕಪ್ಪು ಹಣಕ್ಕಾಗಿ ಜನರ ಬಲಿ : ಎನ್.ವಿಜಯಕುಮಾರ್ ಆರೋಪ

ದೇಶದ ಶೇ.5ರಷ್ಟು ಜನರ ಬಳಿ ಇದ್ದ ಕಪ್ಪು ಹಣವನ್ನು ಪತ್ತೆ ಹಚ್ಚಲು ಶೇ.95ರಷ್ಟು ಜನರ ಜೀವನ ಬಲಿ ಪಡೆಯಲಾಗಿದೆ ಎಂದು ಸಿಪಿಎಂ ಮುಖಂಡ ಎನ್. ವಿಜಯಕುಮಾರ್  ತಿಳಿಸಿದರು.

ಮೈಸೂರಿನಲ್ಲಿ ಸಿಪಿಎಂ ಜಿಲ್ಲಾ ಸಮಿತಿ ಆಯೋಜಿಸಿದ್ದ ನೋಟು ರದ್ಧತಿಯ ಪರಿಣಾಮಗಳ ಕುರಿತ ದುಂಡು ಮೇಜಿನ ಸಭೆಯಲ್ಲಿ ಎನ್.ವಿಜಯಕುಮಾರ್ ಮಾತನಾಡಿದರು. ಮೊಸಳೆಯನ್ನು ಹಿಡಿಯಲು ಕೆರೆಯ ನೀರನ್ನೇ ಬರಿದು ಮಾಡಿ ಮೀನು ಸಾಯಿಸುವ ಕೃತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕೈ ಹಾಕಿದ್ದಾರೆ. ಕಪ್ಪು ಹಣವನ್ನು ಪತ್ತೆ ಮಾಡಲು ನೋಟು ನಿಷೇಧವೊಂದೇ ಮಾರ್ಗವಾಗಿರಲಿಲ್ಲ. ಇನ್ನು ಅನೇಕ ಮಾರ್ಗಗಳಿದ್ದವು. ಅದನ್ನು ಬಿಟ್ಟು ಏಕಾಏಕಿ ನೋಟು ರದ್ಧತಿ ಮಾಡಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಹೇಳಿದರು.

ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಮಾತನಾಡಿ ನೋಟು ರದ್ಧತಿಯ ಆರಂಭದಲ್ಲಿ ಖುಷಿ ಇತ್ತು. ಆದರೆ ದಿನಕಳೆದಂತೆ ಅದರ ಅರಿವಾಗುತ್ತಿದೆ. ಸರ್ಕಾರಕ್ಕೆ ಬದ್ಧತೆ ಇರಬೇಕು. ಬದ್ಧತೆ ಇದ್ದಿದ್ದರೆ ಕಪ್ಪು ಹಣವನ್ನು ಹೊಂದಿರುವವರನ್ನು ಬಂಧಿಸುವ ಕೆಲಸ ಮಾಡಬೇಕಿತ್ತು. ಪದೇ ಪದೇ ನಿಯಮಗಳನ್ನು ಬದಲಿಸಿ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದರು.

ಸಂವಾದದಲ್ಲಿ ಸಮಾಜವಾದಿ ಚಿಂತಕ ಪ.ಮಲ್ಲೇಶ್, ಡಾ.ವಿ.ಲಕ್ಷ್ಮಿನಾರಾಯಣ, ಹೆಚ್.ಆರ್.ಶೇಷಾದ್ರಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: