ದೇಶ

ಕೋಚ್ ಹುದ್ದೆಯಿಂದ ರವಿಶಾಸ್ತ್ರಿಯನ್ನು ಕೆಳಗಿಳಿಸಿ: ಚೇತನ್ ಚೌಹಾಣ್

ಧನಬಾದ್,ಸೆ.17-ಭಾರತ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೋಲಲು ಕೋಚ್ ರವಿಶಾಸ್ತ್ರಿ ನೇರ ಹೊಣೆ. ಹಾಗಾಗಿ ಅವರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಮಾಜಿ ಟೆಸ್ಟ್ ಕ್ರಿಕೆಟಿಗ ಹಾಗೂ ಉತ್ತರಪ್ರದೇಶದ ಕ್ರೀಡಾ ಸಚಿವರೂ ಆಗಿರುವ ಚೇತನ್ ಚೌಹಾಣ್ ಒತ್ತಾಯಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 1-4 ಅಂತರದಿಂದ ಹೀನಾಯವಾಗಿ ಸೋಲಲು ಕಾರಣರಾದ ರವಿ ಶಾಸ್ತ್ರಿ ಅವರನ್ನು ನವೆಂಬರ್‌ನಲ್ಲಿ ನಡೆಯುವ ಆಸ್ಟ್ರೇಲಿಯ ಪ್ರವಾಸಕ್ಕಿಂತ ಮೊದಲು ಹುದ್ದೆಯಿಂದ ಕೆಳಗಿಳಿಸಬೇಕು ಎಂದಿದ್ದಾರೆ.

ರವಿ ಶಾಸ್ತ್ರಿ ಓರ್ವ ಉತ್ತಮ ವೀಕ್ಷಕ ವಿವರಣೆಗಾರ. ಕೋಚ್ ಹುದ್ದೆಯಿಂದ ಅವರನ್ನು ಕೆಳಗಿಳಿಸಿ ವೀಕ್ಷಕ ವಿವರಣೆಗಾರನಾಗಿ ಮುಂದುವರಿಸಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ನೇತೃತ್ವದ ಈಗಿನ ಭಾರತ ತಂಡ ವಿದೇಶಿ ನೆಲದಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಿದೆ ಎಂಬ ಶಾಸ್ತ್ರಿ ಅವರ ಹೇಳಿಕೆಯನ್ನು ಟೀಕಿಸಿದ ಮಾಜಿ ಆರಂಭಿಕ ಆಟಗಾರ ಚೌಹಾಣ್, ಈ ಮಾತನ್ನು ನಾನು ಒಪ್ಪಲಾರೆ. 1980ರಲ್ಲಿದ್ದ ಭಾರತೀಯ ಕ್ರಿಕೆಟ್ ತಂಡ ವಿಶ್ವದಲ್ಲಿ ಶ್ರೇಷ್ಠ ಪ್ರವಾಸಿ ತಂಡವಾಗಿತ್ತು ಎಂದಿದ್ದಾರೆ. (ಎಂ.ಎನ್)

Leave a Reply

comments

Related Articles

error: