ದೇಶಮೈಸೂರು

ಕಾಲೇಜುಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ : ಇಲಾಖೆಯಿಂದ ಸುತ್ತೋಲೆ

ಸರ್ಕಾರಿ ಕಾಲೇಜುಗಳಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು ಇಲಾಖೆಗೊಳಪಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಶಿಸ್ತುಪಾಲನೆ ಹಿನ್ನೆಲೆಯಲ್ಲಿ ಹಾಜರಾತಿಗೆ ತಂತ್ರಜ್ಞಾನದ ಟಚ್‍ ಇರುವ ಬಯೋಮೆಟ್ರಿಕ್‍ನಿಂದಾಗಿ ಕರಾರುವಕ್ಕಾದ ಸ್ಪಷ್ಟತೆ ಲಭಿಸಲಿದ್ದು ಸಿಬ್ಬಂದಿಗಳು, ಬೋಧಕ-ಬೋಧಕೇತರರು ಬಯೋಮೆಟ್ರಿಕ್‍ ಮೂಲಕ ಹಾಜರಾತಿ ಮಾಡಿಕೊಳ್ಳಬೇಕಾಗಿದ್ದು ಅನಧಿಕೃತ ಗೈರಿಗೆ ತಡೆ ಬೀಳಲಿದೆ.

ಸಂಜೆ ಮುಂಚಿತವಾಗಿ ತೆರಳುವವರಿಗೆ ಕಡಿವಾಣ ಬೀಳಲಿದೆ ಹಾಗೂ ಕೆಲಸದ ವೇಳೆಯಲ್ಲಿ ಹಾಜರಿಲ್ಲದಿರುವ ಸಿಬ್ಬಂದಿ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳಬಹುದಾಗಿದು, ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಕಾಲೇಜುಗಳಿಂದ ವರಿದ ಸಲ್ಲಿಸಬೇಕು ಎಂದು ಕಾಲೇಜು ಶಿಕ್ಷಣ ಆಡಳಿತಾಧಿಕಾರಿ ಪ್ರಾಂಶುಪಾಲರಿಗೆ ಸುತ್ತೋಲೆ ಹೊರಡಿಸಿದ್ದಾರೆ.

Leave a Reply

comments

Related Articles

error: