ಮನರಂಜನೆ

`ವೃತ್ರ’ ಚಿತ್ರದಿಂದ ಹೊರಬಂದ ನಟಿ ರಶ್ಮಿಕಾ ಮಂದಣ್ಣ

ಬೆಂಗಳೂರು,ಸೆ.17-ನಟಿ ರಶ್ಮಿಕಾ ಮಂದಣ್ಣ `ವೃತ್ರ’ ಚಿತ್ರದಿಂದ ಹೊರಬಂದಿದ್ದಾರೆ. ಡೇಟ್ಸ್ ಕ್ಲಾಶ್ ಆಗಿರುವ ಕಾರಣ ‘ವೃತ್ರ’ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಗುಡ್ ಬೈ ಹೇಳಿದ್ದಾರೆ.

ಸದ್ಯಕ್ಕೆ ಟಾಲಿವುಡ್ ನಲ್ಲಿ ಸಖತ್ ಬ್ಯುಸಿಯಾಗಿರುವ ರಶ್ಮಿಕಾ ಅವರ ಡೇಟ್ಸ್ ಮುಂದಿನ ವರ್ಷಾರಂಭದವರೆಗೂ ಅವರ ಬ್ಲಾಕ್ ಆಗಿದೆ. ‘ವೃತ್ರ’ ಚಿತ್ರಕ್ಕೆ ಅವರ ಬಳಿ ಡೇಟ್ಸ್ ಇಲ್ಲ. ಹೀಗಾಗಿ, ಬೇರೆ ದಾರಿ ಇಲ್ಲದೆ ‘ವೃತ್ರ’ದಿಂದ ಹೊರಗೆ ಬಂದಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿ ಹೇಳಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ‘ನಾನು ‘ವೃತ್ರ’ ಚಿತ್ರದಲ್ಲಿ ಇರುವುದಿಲ್ಲ. ವೃತ್ತಿ ಜೀವನದ ಆರಂಭದಲ್ಲಿಯೇ ಇಂತಹ ನಿರ್ಧಾರ ಒಳ್ಳೆಯದಲ್ಲ ಎಂದು ನಾನು ಭಾವಿಸಿದ್ದೆ. ಈ ಬಗ್ಗೆ ನಾನು ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರ ಬಳಿ ಚರ್ಚೆ ಮಾಡಿದ್ದೆ. ಅವರು ನನ್ನ ಪರಿಸ್ಥಿತಿಯನ್ನ ಅರ್ಥ ಮಾಡಿಕೊಂಡಿದ್ದಾರೆ. ಗೌತಮ್ ಹಾಗೂ ಇಡೀ ತಂಡಕ್ಕೆ ನನ್ನ ಶುಭಾಶಯಗಳು ಎಂದಿದ್ದಾರೆ.

ಗೌತಮ್ ಅಯ್ಯರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ವೃತ್ರ ಚಿತ್ರಕ್ಕಾಗಿ ರಶ್ಮಿಕಾ ಈಗಾಗಲೇ ಫೋಟೋ ಶೂಟ್ ಕೂಡ ಮಾಡಿಸಿದ್ದರು. ಈ ಚಿತ್ರದಲ್ಲಿ ರಶ್ಮಿಕಾ ತನಿಖಾ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಲಿದ್ದರು.

ರಕ್ಷಿತ್-ರಶ್ಮಿಕಾ ನಡುವಿನ ಬ್ರೇಕ್ ಸುದ್ದಿ ಬಗ್ಗೆ ರಶ್ಮಿಕಾ ತಾಯಿ ಸುಮನ್ ಮಂದಣ್ಣ, ರಕ್ಷಿತ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಆದರೆ ಈವರೆಗೂ ರಶ್ಮಿಕಾ ಈ ಬಗ್ಗೆ ಮಾತನಾಡಿಲ್ಲ. (ಎಂ.ಎನ್)

Leave a Reply

comments

Related Articles

error: