ಕರ್ನಾಟಕಪ್ರಮುಖ ಸುದ್ದಿ

ಪೆಟ್ರೋಲ್ ಬೆಲೆ ಕನಿಷ್ಠ 10 ರೂ.ಇಳಿಸಬೇಕು: ಶಾಸಕ ರೇಣುಕಾಚಾರ್ಯ ಒತ್ತಾಯ

ಬೆಂಗಳೂರು (ಸೆ.17): ಪೆಟ್ರೋಲ್, ಡೀಸೆಲ್ ದರವನ್ನು 2 ರೂ. ಇಳಿಕೆ ಮಾಡಿದರೆ ಸಾಲದು, ಕನಿಷ್ಠ 10 ರೂ. ಇಳಿಕೆಯಾಗಬೇಕು ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮ್ಮನೆ ವಿಷಯಗಳನ್ನು ಜನರ ಗಮನವನ್ನು ಬೇರೆ ಕಡೆ ತಿರುಗಿಸಲು ಈ ರೀತಿ ಕಿಂಗ್ ಪಿನ್, ತೈಲಬೆಲೆ ಇಳಿಕೆ ಕುರಿತು ಮಾತನಾಡುತ್ತಿದ್ದಾರೆ. ಆದರೆ ನಾವು ಆ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ನಾವು ಬರೀ ರಾಜಕಾರಣ ಮಾಡಿದರೆ ನಮ್ಮ ಕ್ಷೇತ್ರದ ಜನ ಕ್ಷಮಿಸುವುದಿಲ್ಲ. ಹಾಗಾಗಿ ನಾವು ನಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿದರು.

ಮೈತ್ರಿ ಸರ್ಕಾರ ಉರುಳಿಸಲು ಕಿಂಗ್‍ಪಿನ್‍ಗಳು ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದರು. ಸಿಎಮ್‍ಗೆ ತಾಕತ್ ಇದ್ರೆ, ಕಿಂಗ್ ಪಿನ್ ಗಳನ್ನು ಬಂಧಿಸಲಿ, ಅದನ್ನು ಬಿಟ್ಟು ಬರೀ ರಾಜಕಾರಣ ಮಾಡಿದರೆ ಜನ ಅವರನ್ನು ಕ್ಷಮಿಸುವುದಿಲ್ಲ ಎಂದು ರೇಣುಕಾಚಾರ್ಯ ಕಿಡಿಕಾರಿದರು. (ಎನ್.ಬಿ)

Leave a Reply

comments

Related Articles

error: