ಕರ್ನಾಟಕಪ್ರಮುಖ ಸುದ್ದಿ

ಬಿ.ಸಿ.ಪಾಟೀಲ್ ಸೇರಿ 16 ಕಾಂಗ್ರೆಸ್ಸಿಗರಿಗೆ ಬಿಜೆಪಿ ಆಮಿಷ: ಸಚಿವ ಡಿಕೆಶಿ ಆರೋಪ

ಕಲಬುರಗಿ (ಚವಡಾಪುರ) ಸೆ.17: ಆಪರೇಷನ್ ಕಮಲದಲ್ಲಿ ಸಿ.ಪಿ.ಯೋಗೇಶ್ವರ್ ಒಬ್ಬರೇ ಅಲ್ಲ. ಹಲವರು ಭಾಗಿಯಾಗಿದ್ದಾರೆ ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಕೆಡವಲು ಬಿಜೆಪಿಗರು ಬಹಳಷ್ಟು ಉತ್ಸುಕರಾಗಿದ್ದಾರೆ. ಆಪರೇಷನ್ ಕಮಲದ ಹೆಸರಲ್ಲಿ ಬಿ.ಸಿ.ಪಾಟೀಲ್, ರಹೀಮ್ ಸೇರಿದಂತೆ 15 ರಿಂದ 16 ಶಾಸಕರನ್ನು ಸಂಪರ್ಕಿಸಿದ್ದಾರೆ. ಆದರೂ ಅವರ ಬೇಳೆ ಬೇಯುತ್ತಿಲ್ಲವೆಂದು ಗೊತ್ತಾಗಿ ಸುಮ್ಮನಿದ್ದಾರೆ. ಅಲ್ಲದೆ ಸುಖಾಸುಮ್ಮನೆ ಆರೋಪ ಮಾಡಿ ಜನರಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಅರ್ಜೆಂಟಾಗಿ ಹೋದ್ರೆ ಅಪಘಾತವಾಗುವ ಸಾಧ್ಯತೆ ಇದೆ, ಹೀಗಾಗಿ ನಮ್ಮ ಸಮ್ಮಿಶ್ರ ಸರ್ಕಾರ ನಿಧಾನವಾಗಿ ಹೋಗ್ತಿದೆ ಎಂದರು.

ಇನ್ನು ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ವಿದ್ಯಮಾನಗಳೆಲ್ಲ ಬಿಜೆಪಿಯವರ ಸೃಷ್ಟಿಯೇ ಹೊರತು ಇನ್ನೇನೂ ಅಲ್ಲ. ಸಮ್ಮಿಶ್ರ ಸರ್ಕಾರ ಉರುಳುವುದಿಲ್ಲ. ಸಿದ್ದರಾಮಯ್ಯರಿಂದ ಯಾವುದೇ ರಾಜಕೀಯ ಬದಲಾವಣೆಯಾಗುವುದಿಲ್ಲ. ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ನಡೆದುಕೊಳ್ಳುತ್ತೇವೆ ಎಂದು ಶಿವಕುಮಾರ್ ಪುನರುಚ್ಚರಿಸಿದರು.(ಎನ್.ಬಿ)

Leave a Reply

comments

Related Articles

error: