ಮೈಸೂರು

ರಂಗಾಯಣ : ಕಲಾವಿದರ ಚಳುವಳಿಗೆ ತಾತ್ಕಾಲಿಕ ವಿರಾಮ

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಿದ್ಧತೆ ಹಿನ್ನೆಲೆಯಲ್ಲಿ ರಂಗಾಯಣದ ಆವರಣದಲ್ಲಿ ಕಲಾವಿದರು ನಡೆಸುತ್ತಿದ್ದು ಅಸಹಕಾರ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.

ಕಲಾವಿದರ ಆರ್ಥಿಕ ಭದ್ರತೆ ಸೇರದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸ್ಪಷ್ಟ ಭರವಸೆ ನೀಡುವವರೆಗೂ ಚಳುವಳಿ ನಡೆಸುವ ಇರಾದೆ ಹೊಂದಿದ್ದ ಕಲಾವಿದರು ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಗೆ ಹಿರಿಯ ರಂಗನಟ ಮಂಡ್ಯ ರಮೇಶ್, ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಹಾಗೂ ಇತರರು ಪ್ರತಿಭಟನೆಗೆ ಬೆಂಬಲ ನೀಡಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾವಿದರ ಬೇಡಿಕೆಗಳಿಗೆ  ಪೂರಕವಾಗಿ ಸ್ಪಂದಿಸಿರುವ ಹಿನ್ನೆಲೆಯಲ್ಲಿ ಕಲಾವಿದರು ಚಳುವಳಿಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ.

ಈಚೆಗೆ ನಿಧನರಾದ ರಂಗಾಯಣ ಕಲಾವಿದ ಮಂಜುನಾಥ್ ಬೆಳಕೆರೆ ಅವರ ಕುಟುಂಬಕ್ಕೆ ಆರ್ಥಿಕ ನೆರವು, ವೃತ್ತಿಪರ ಕಲಾವಿದರಿಗೆ ಆರ್ಥಿಕ ಭದ್ರತೆ, ನಿವೃತ್ತಿ ನಂತರ ನಿಗದಿತ ಮೊತ್ತಕ್ಕಾಗಿ ಸರ್ಕಾರದಿಂದ ನಿಧಿ ಸ್ಥಾಪನೆ ಸೇರಿದಂತೆ ಹಲವಾರು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಂಗಾಯಣದ ಆವರಣದಲ್ಲಿ ಕಲಾವಿದರು ಅಸಹಕಾರ ಚಳುವಳಿ ಹಮ್ಮಿಕೊಂಡಿದ್ದರು.

ಬೇಡಿಕೆ ಈಡೇರಿಕೆಗಾಗಿ ಸರ್ಕಾರಕ್ಕೆ ಡಿ.31ರವರೆಗೆ ಕಾಲಾವಕಾಶವನ್ನು ನೀಡಿ ತಾತ್ಕಾಲಿಕವಾಗಿ ಚಳುವಳಿಗೆ ತೆರವು ನೀಡಲಾಗಿದೆ.

 

Leave a Reply

comments

Related Articles

error: