ಪ್ರಮುಖ ಸುದ್ದಿಮೈಸೂರು

ವಿಶ್ವಕರ್ಮ ಸಮುದಾಯದ ಯುವಕರು ಸರ್ಕಾರದಿಂದ ಸಿಗುವ ಯೋಜನೆ, ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ : ಸಚಿವ ಜಿ.ಟಿ.ದೇವೇಗೌಡ

ಮೈಸೂರು,ಸೆ.17:-  ವಿಶ್ವಕರ್ಮ ಸಮುದಾಯದವರು ವಿದ್ಯಾವಂತರಾಗಬೇಕು. ಯುವಕರು ಮುಂದೆ ಬರಬೇಕು. ಸರ್ಕಾರದಿಂದ ಸಿಗುವ ಯೋಜನೆಗಳನ್ನು, ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ವಿಶ್ವಕರ್ಮ ಜಯಂತಿ ಮಹೋತ್ಸವ ಹಿನ್ನೆಲೆಯಲ್ಲಿಂದು ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಜಯಂತೋತ್ಸವ ಸಮಿತಿಯಿಂದ  ಕಲಾ ಮಂದಿರದಲ್ಲಿ ದೀಪ ಬೆಳಗಿಸಿ,ವಿಶ್ವ ಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವ ಅರ್ಪಿಸುವ ಮೂಲಕ ಚಾಲನೆ ನೀಡಿದರು. ಸಮಿತಿ ವತಿಯಿಂದ ಸಚಿವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದೆಸಿ ಅಭಿನಂದಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು ಈ ಸಮಿತಿಯವರು ಸಂಘಟನೆಯನ್ನು ಮಾಡಿದ್ದಾರೆ. ಅರಮನೆ ಮುಂಭಾಗದಿಂದ ಮೆರವಣಿಗೆ ಮಾಡಿ ಕಲಾ ಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಎಲ್ಲರಿಗೂ ಜಯಂತೋತ್ಸವದ ಶುಭಾಶಯಗಳು. ವಿಶ್ವ ಕರ್ಮ ಸಮುದಾಯದವರು ಕುಲಕಸುಬು ಮಾಡುತ್ತಿದ್ದವರು. ನಮಗೆ ಮನೆ ಇಲ್ಲ ಅಂತ ಮನವಿ ಮಾಡಿದ್ದಾರೆ. ದೇವಸ್ಥಾನ ಕಟ್ಟಿದ್ದವರಿಗೆ ದೇವಸ್ಥಾನಕ್ಕೆ ಪ್ರವೇಶ ಇರುವುದಿಲ್ಲ. ಕಲ್ಯಾಣ ಮಾಡಬೇಕಾದರೂ ಮಾಂಗಲ್ಯ ತಯಾರಿಸಲು,ರೈತನ ನೇಗಿಲು ಸೇರಿದಂತೆ ಎಲ್ಲಾ ಕಡೆ ವಿಶ್ವ ಕರ್ಮರು ತೊಡಗಿಸಿಕೊಂಡಿದ್ದಾರೆ. ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾ ಬದುಕನ್ನು ನಡೆಸುತ್ತಿದ್ದಾರೆ. ಬೇರೆ ಕಂಪನಿಗಳು ಸ್ಥಾಪನೆಯಾಗಿದೆ. ಇದರಿಂದ ನಿರುದ್ಯೋಗ ಎದುರಾಗಿದೆ. 42 ಲಕ್ಷ ಮಂದಿ ವಿಶ್ವ ಕರ್ಮರಿದ್ದೀರಿ. ಕಡಿಮೆ ಜನರು ಇರುವವರು ಶಾಸಕರು, ಸಂಸದರು ಆಗಿದ್ದಾರೆ.ಕೆ.ಪಿ.ನಂಜುಂಡಿ, ರಘು ಆಚಾರ್ಯ,ಇವರಿಬ್ಬರು ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು. ಮೈಸೂರು ಮಹಾ ನಗರ ಪಾಲಿಕೆಯಲ್ಲಿ ರಮಣಿ ಹಾಗೂ ಛಾಯಾದೇವಿಯವರು ವಿಶ್ವ ಕರ್ಮ ಸಮುದಾಯದವರು ಇದು ಕೂಡ ಸಂತಸದ ವಿಷಯವೇ. ಎಲ್ಲಾ ಒಟ್ಟಿಗೆ ಸೇರಿ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಣ್ಣ,ಗುಡಿ ಕೈಗಾರಿಕೆ ಸ್ಥಾಪಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಎಲ್ಲರೂ ವಿದ್ಯಾವಂತರಾಗಬೇಕು.ಯುವಕರು ಮುಂದೆ ಬರಬೇಕು. ಸರ್ಕಾರದಿಂದ ಸಿಗುವ ಯೋಜನೆಗಳನ್ನು, ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಜಿಲ್ಲೆಯಲ್ಲಿ ಎಲ್ಲಾ ಪಕ್ಷದ ನಾಯಕರು ಒಗ್ಗಟ್ಟಾಗಿದ್ದೇವೆ. ಈ ಸಮುದಾಯಕ್ಕೆ ಎಲ್ಲರೂ ಒಗ್ಗೂಡಿ ಶ್ರಮಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ,ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚೆನ್ನಪ್ಪ, ಸಮಿತಿ ಜಿಲ್ಲಾಧ್ಯಕ್ಷ ಹುಚ್ಚಪ್ಪಚಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: