ಮೈಸೂರು

ಭ್ರಷ್ಟಾಚಾರ ವಿರುದ್ಧ ಓಟಕ್ಕೆ ಚಾಲನೆ

ಭ್ರಷ್ಟಾಚಾರ ವಿರುದ್ಧ ಜಾಗೃತಿ ಮೂಡಿಸಲು ಮೈಸೂರು ನಗರದ ರೋಟರಿ ಕ್ಲಬ್ ವತಿಯಿಂದ ಭ್ರಷ್ಟಾಚಾರ ವಿರುದ್ಧ ಓಟ ಮತ್ತು ನಡಿಗೆಯನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನ ಬಳಿ ಭಾನುವಾರ ಬೆಳಿಗ್ಗೆ ರೋಟರಿ ಗವರ್ನರ್ ಯಶಸ್ವಿ ಸೋಮಶೇಖರ್ ಅವರು ಮ್ಯಾರಥಾನ್ ಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಇಂದಿನ ಯುವ ಜನತೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಬೇಕು. ಭ್ರಷ್ಟಾಚಾರವನ್ನು ತೊಡೆದುಹಾಕಲು ಯುವಜನತೆ ಮುಂದೆ ಬರಬೇಕು. ಯುವಕರು ತಮ್ಮ ಕೆಲವನ್ನು ಮಾಡಿಸಿಕೊಳ್ಳಲು ಹಣ ನೀಡದೇ ತಾಳ್ಮೆಯಿಂದ ಕಾಯಬೇಕಿದೆ. ಭ್ರಷ್ಟಾಚಾರ ಮುಕ್ತ  ಭಾರತವನ್ನು ಮಾಡುವುದು ಇಂದಿನ ಯುವಕರ ಕೈಯ್ಯಲಿದೆ ಎಂದರು. ಕ್ರಿಸ್ಮಸ್ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಪ್ರಯುಕ್ತ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮ್ಯಾರಥಾನ್ 5 ಕಿ.ಮೀ, ಹಾಗೂ ವಾಕಥಾನ್ 2.5 ಕಿ.ಮೀ. ಒಳಗೊಂಡಿತ್ತು. ವಾಕಥಾನ್ ಮತ್ತು ಮ್ಯಾರಥಾನ್ ಗಳಲ್ಲಿ ಮಕ್ಕಳಾದಿಯಾಗಿ ವೃದ್ಧರವರೆಗೂ ಪಾಲ್ಗೊಂಡು ಗಮನ ಸೆಳೆದರು. ನೂರಾರು ಮಂದಿ ಈ ಸಂದರ್ಭ ಭಾಗವಹಿಸಿದ್ದರು.

Leave a Reply

comments

Related Articles

error: