ಸುದ್ದಿ ಸಂಕ್ಷಿಪ್ತ

ದಸರೆ ಕವಿಗೋಷ್ಠಿ : ಕವಿತೆ ಆಹ್ವಾನ

ಉತ್ತಮ ಕಾದಂಬರಿ ಪ್ರಶಸ್ತಿಗೆ ಆಹ್ವಾನ

ಮೈಸೂರು,ಸೆ.17 : ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗದ ವತಿಯಿಂದ ದಸರಾ ಕವಿಗೋಷ್ಠಿಗೆ ಭಾಗವಹಿಸಲಿಚ್ಚಿಸುವವ ಕವಿಗಳಿಂದ ಕವಿತೆಗಳನ್ನು ಆಹ್ವಾನಿಸಲಾಗುತ್ತಿದೆ.

ತಮ್ಮ ಎರಡು ಉತ್ತಮ ಕವಿತೆಗಳನ್ನು ಸೆ.30ರೊಳಗೆ, ರಂಗನಾಥ್, ಪ್ರಧಾನ ಕಾರ್ಯದರ್ಶಿ, ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ, ನಂ. 75, ಇ ಬ್ಲಾಕ್, 15ನೇ ಕ್ರಾಸ್, ಜೆ.ಪಿ.ನಗರ, ಮೈಸೂರು 570 031 ಇಲ್ಲಿಗೆ ಕಳುಹಿಸಬಹುದಾಗಿದೆ.

ಕಾದಂಬರಿಗಳ ಪ್ರಶಸ್ತಿ : ಉತ್ತಮ ಕಾದಂಬರಿಗಳಿಗೆ ಕೊಡಮಾಡಲ್ಪಡುವ ಸವಿಗನ್ನಡ ಸಾಂಸ್ಕೃತಿಕ ಪ್ರಶಸ್ತಿ ಆಯ್ಕೆಗೆ ಕಾದಂಬರಿಗಳನ್ನು ಆಹ್ವಾನಿಸಲಾಗುತ್ತಿದೆ, ಆಸಕ್ತ ಲೇಖಕರು 2018ರಲ್ಲಿ ಪ್ರಕಟಗೊಂಡ ತಮ್ಮ ಕಾದಂಬರಿಯ ಎರಡು ಪ್ರತಿಗಳನ್ನು ನಂ. 775, ನೈದಿಲೆ, 12ನೇ ಮುಖ್ಯರಸ್ತೆ, 13ನೇ ಕ್ರಾಸ್, ಸರಸ್ವತಿಪುರಂ, ಮೈಸೂರು 570009 ಇಲ್ಲಿ ಸೆ.25ರೊಳಗೆ ಕಳುಹಿಸಬೇಕೆಂದು ತಿಳಿಸಲಾಗಿದೆ.

Leave a Reply

comments

Related Articles

error: