ಮೈಸೂರು

ನಗದು ರಹಿತ ವ್ಯಾಪಾರ: ವ್ಯಾಪಾರಿಗಳಲ್ಲಿ ಅರಿವು ಕಾರ್ಯಕ್ರಮ

ಮೈಸೂರಿನ ದೇವರಾಜ ಮಾರುಕಟ್ಟೆಯ ಬಳಿ ಇರುವ ಚಿಕ್ಕ ಗಡಿಯಾರ ವೃತ್ತದಲ್ಲಿ ಆನ್ ಲೈನ್ ಹಾಗೂ ಮೊಬೈಲ್ ಮೂಲಕ ವ್ಯಾಪಾರ ವಹಿವಾಟು ಮಾಡುವುದರ ಕುರಿತು ವ್ಯಾಪಾರಿಗಳಲ್ಲಿ ಅರಿವು ಮೂಡಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿಯವರ ನಗದು ರಹಿತ ವ್ಯಾಪಾರ ಕುರಿತಂತೆ ಮಾಜಿ ಸಚಿವ ಎಸ್.ಎ.ರಾಮದಾಸ್ ಮತ್ತು ಅವರ ಬೆಂಬಲಿಗರು ಭಾನುವಾರ ಬೆಳಿಗ್ಗೆ ದೇವರಾಜ ಮಾರುಕಟ್ಟೆ ಬಳಿ ಇರುವ ಚಿಕ್ಕ ಗಡಿಯಾರದ ಸಮೀಪ ತೆರಳಿ ನಗದುರಹಿತ ವ್ಯಾಪಾರವನ್ನು ಹೇಗೆ ನಡೆಸಬೇಕೆನ್ನುವುದನ್ನು ಪ್ರಾಯೋಗಿಕವಾಗಿ ವ್ಯಾಪಾರಿಗಳಿಗೆ ತಿಳಿಸಿಕೊಟ್ಟರು.

ಮಾಜಿ ಸಚಿವ ಎಸ್.ಎ.ರಾಮದಾಸ್ ಮಾತನಾಡಿ, ದೇಶವನ್ನು ನಗದು ರಹಿತ ಮಾಡಬೇಕೆಂಬ ಕನಸನ್ನು ಪ್ರಧಾನಿ ನರೇಂದ್ರ ಮೋದಿಯವರು ಕಂಡಿದ್ದು, ಅದನ್ನು ನಾವು ನನಸಾಗಿಸಬೇಕು ಎಂದರು. ನಗದು ರಹಿತ ವಹಿವಾಟಿನಿಂದ ಕಪ್ಪು ಹಣವನ್ನು ಬಯಲಿಗೆಳೆಯಲು ಸಾಧ್ಯ. ಅದಕ್ಕೆ ತಾವೆಲ್ಲರೂ ಪ್ರೋತ್ಸಾಹ ನೀಡಬೇಕು ಎಂದರು. ಅದನ್ನು ಕಾರ್ಯರೂಪಕ್ಕೆ ತರುವ ಮೊದಲು ಎಲ್ಲರಿಗೂ ಈ ಕುರಿತು ಮಾಹಿತಿ ಮತ್ತು ಅರಿವು ಮೂಡಿಸುವುದು ಅಗತ್ಯವಾಗಿದೆ. ದೇಶದ ಅಭಿವೃದ್ಧಿಗೋಸ್ಕರ ನಾವಿದನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭ ಮೇಯರ್ ಎಂ.ಜೆ. ರವಿಕುಮಾರ್,  ಸೇಫ್ ವ್ಹೀಲ್ ನ ಮ್ಯಾನೆಜಿಂಗ್ ಡೈರೆಕ್ಟರ್ ಪ್ರಶಾಂತ್, ಜಿಎಸ್ಎಸ್ ಪ್ರಾಪರ್ಟೀಸ್ ನ ಶ್ರೀಹರಿ ಹಾಗೂ ಬ್ಯಾಂಕ್ ನ ನಿವೃತ್ತ ನೌಕರರು ಉಪಸ್ಥಿತರಿದ್ದರು.

Leave a Reply

comments

Related Articles

error: