ಸುದ್ದಿ ಸಂಕ್ಷಿಪ್ತ

ಮೈಕ್ರೋ ಕ್ರೆಡಿಟ್ ಯೋಜನೆ: ಅರ್ಜಿ ಆಹ್ವಾನ

ಮೈಸೂರು, ಸೆ.17-ಡಾ.ಬಿ.ಆರ್.ಅಂಬೇಡ್ಕರ್  ಅಭಿವೃದ್ಧಿ ನಿಗಮದ ವತಿಯಿಂದ ಅನುಷ್ಠಾನಗೊಳಿಸುವ ಉದ್ಯಮಶೀಲತಾ ಯೋಜನೆ/ ಮೈಕ್ರೋ ಕ್ರೆಡಿಟ್ ಯೋಜನೆಗಳಿಗೆ 2018-19ನೇ ಸಾಲಿನಲ್ಲಿ ಅರ್ಹ ಪರಿಶಿಷ್ಟಜಾತಿಯ ಫಲಾಪೇಕ್ಷಿಗಳಿಂದ  ಅರ್ಜಿ ಆಹ್ವಾನಿಸಿದೆ.

ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು ಹಾಗೂ ಕನಿಷ್ಠ 15 ವರ್ಷಗಳಿಂದ ಕರ್ನಾಟಕದ ನಿವಾಸಿಯಾಗಿರಬೇಕು. ಅರ್ಜಿದಾರರು 18 ರಿಂದ 60 ವರ್ಷದೊಳಗಿನ ವಯೋಮಾನದವರಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶವಾದಲ್ಲಿ 98,000 ರೂ.ಗಳು ಹಾಗೂ ನಗರ ಪ್ರದೇಶದಲ್ಲಿ 1,20,000 ರೂ. ಮಿತಿಯಲ್ಲಿರಬೇಕು. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು. ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು.

ಪಾಸ್‍ಪೋರ್ಟ್  ಅಳತೆಯ ಭಾವಚಿತ್ರ, ಜಾತಿ ಪ್ರಮಾಣ ಪತ್ರದ ಜೆರಾಕ್ಸ್, ಕುಟುಂಬದ ವಾರ್ಷಿಕ ವರಮಾನ ಪತ್ರದ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್‍ನ ಪ್ರತಿ/ಮತದಾರರ ಗುರುತಿನಚೀಟಿ/ಪಡಿತರಚೀಟಿ ಲಗತ್ತಿಸಿ ಅರ್ಜಿ ಸಲ್ಲಿಸಲು ಅಕ್ಟೋಬರ್ 13 ಕೊನೆಯ ದಿನ. ಅರ್ಜಿಯನ್ನು ಜಿಲ್ಲಾ ಕಚೇರಿಯಲ್ಲಿ ವಿತರಿಸಲಾಗುವುದು. ತಾಲ್ಲೂಕು ಮಟ್ಟದಲ್ಲಿ ನಿಗಮದ ತಾಲ್ಲೂಕು ಅಭಿವೃದ್ಧಿ ಅಧಿಕಾರಿಗಳ ಮೂಲಕ ಉಚಿತವಾಗಿ ಪಡೆದುಕೊಳ್ಳುವುದು

ನಿಗಮದ ಅಂತರ್ಜಾಲ www.adcl.karnataka.gov.in ಇಲ್ಲಿ 2018-19ನೇ ಸಾಲಿನ ಅರ್ಜಿ ನಮೂನೆ  ಪಡೆಯಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿ ದೂ.ಸಂ. 0821-2332480 ಅನ್ನು ಸಂಪರ್ಕಿಸಬಹುದು. (ಎಂ.ಎನ್)

Leave a Reply

comments

Related Articles

error: