ಕರ್ನಾಟಕ

ಪಾಲಿಹೌಸ್ ಸೌಲಭ್ಯಕ್ಕೆ ಸಹಾಯಧನ

ಹಾಸನ (ಸೆ.17): ತೋಟಗಾರಿಕೆ ಇಲಾಖೆವತಿಯಿಂದ ಕೃಷಿಭಾಗ್ಯ ಭಾಗ್ಯ ಯೋಜನೆಯಡಿ 2018-19 ಸಾಲಿನ ಪಾಲಿಹೌಸ್ ಸೌಲಭ್ಯ ಪಡೆಯಲು ಸಹಾಯಧನ ನೀಡಲಾಗುತ್ತಿದ್ದು, ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಯೋಜನೆಯು ಮಳೆಯಾಶ್ರಿತ ತೋಟಗಾರಿಕೆಯನ್ನು ಸುಸ್ಥಿರ ತೋಟಗಾರಿಕೆಯನ್ನಾಗಿ ಪರಿವರ್ತಿಸುವುದು, ಒಣಭೂಮಿ ತೋಟಗಾರಿಕೆಗೆ ಉತ್ತೇಜನ ನೀಡುವುದಾಗಿದ್ದು ಹಾಗೂ ವರ್ಷದ ಎಲ್ಲಾ ಋತುಮಾನಗಳಲ್ಲಿಯೂ ತೋಟಗಾರಿಕೆ ಬೆಳೆಗಳನ್ನು ಬೆಳೆಯಬಹುದಾಗಿದ್ದು, ತೋಟಗಾರಿಕೆ ಉತ್ಪನ್ನಗಳ ಉತ್ಪಾದಕತೆಯನ್ನು ಎರಡರಿಂದ ಮೂರು ಪಟ್ಟು ಹೆಚಿಸುವುದಲ್ಲದೇ, ತರಕಾರಿ/ ಹೂ ಬೆಳೆಗಳನ್ನು ಸಂರಕ್ಷಿತ ಬೇಸಾಯದಡಿ ಪ್ರೋತ್ಸಾಹಿಸುವುರ ಮೂಲಕ ರೈತರ ಆದಾಯವನ್ನು ಹೆಚ್ಚಿಸಿ ರೈತರ ಆರ್ಥಿಕ ಅಭಿವೃಧ್ಧಿಗೆ ಸಹಕರಿಸುತ್ತದೆ.

ಸೌಲಭ್ಯವನ್ನು ಪಡೆದ ರೈತರಿಗೆ ಶೇ.50ರಷ್ಟು ಸಹಾಯಧನವನ್ನು ಇಲಾಖಾ ಮಾರ್ಗಸೂಚಿಯನ್ವಯ ನೀಡಲಾಗುತ್ತದೆ. ಸೌಲಭ್ಯವನ್ನು ಪಡೆಯಲಿಚ್ಛಿಸುವ ಆಸಕ್ತ ರೈತರು ಸೆ.18 ರೊಳಗಾಗಿ ಹಾಸನ ಜಿಲ್ಲಾ ಪಂಚಾಯತ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08172-262390, ಸಹಾಯಕ ತೋಟಗಾರಿಕೆ ಅಧಿಕಾರಿ, ಹಾಸನ ಕಸಬಾ ಹೋಬಳಿ 9972641553, ಸಹಾಯಕ ತೋಟಗಾರಿಕೆ ಅಧಿಕಾರಿ, ಶಾಂತಿಗ್ರಾಮ ಹೋಬಳಿ 9844340103, ಸಹಾಯಕ ತೋಟಗಾರಿಕೆ ಅಧಿಕಾರಿ, ಕಟ್ಟಾಯ ಹೋಬಳಿ 8867452263, ಸಹಾಯಕ ತೋಟಗಾರಿಕೆ ಅಧಿಕಾರಿ, ಸಾಲಗಾಮೆ ಹೋಬಳಿ 9481364989, ಸಹಾಯಕ ತೋಟಗಾರಿಕೆ ಅಧಿಕಾರಿ, ದುದ್ದ ಹೋಬಳಿ 9113690760. (ಎನ್.ಬಿ)

Leave a Reply

comments

Related Articles

error: