ಪ್ರಮುಖ ಸುದ್ದಿಮೈಸೂರು

ಸೆ.30ರಿಂದ ಅಕ್ಟೋಬರ್ 5ರವರೆಗೆ ಯುವ ಸಂಭ್ರಮ : ಅ.12ರಿಂದ 17ರವರೆಗೆ ಯುವ ದಸರಾ

ಮೈಸೂರು,ಸೆ.18:- ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ಸೆ.30ರಿಂದ ಅಕ್ಟೋಬರ್ 5ರವರೆಗೆದಸರಾ ಮಹೋತ್ಸವದ ಅಂಗವಾಗಿ ಯುವ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅ.12ರಿಂದ 17ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಕಾರ್ಯಕ್ರಮ ನಡೆಯಲಿದೆ ಎಂದು ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಭವನದಲ್ಲಿ ನಿನ್ನೆ ಯುವ ದಸರಾ ಉಪಸಮಿತಿ ಆಯೋಜಿಸಿದ್ದ ಪ್ರಾಂಶುಪಾಲರೊಂದಿಗಿನ ಸಭೆಯಲ್ಲಿ ಮಾಹಿತಿ ನೀಡಿದ ಅವರು ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿದ ಮೇಲೆ ಕಾರ್ಯಕ್ರಮಕ್ಕೆ ಕರೆತನ್ನಿ ಟ್ರಯಲ್ ಗಾಗಿ ತರಬೇಡಿ ಎಂದು ಸೂಚನೆ ನೀಡಿದರು. ಒಂದು ತಂಡಕ್ಕೆ 8ರಿಂದ 12ನಿಮಿಷಗಳ ವರೆಗೆ ಕಾಲಾವಕಾಶವಿರಲಿದ್ದು, ಈ ಸಲ ಮಾನವ ನಿರ್ಮಿತ ಆಪತ್ತು, ಪರಿಸರ ಸಂರಕ್ಷಣೆ, ರಾಷ್ಟ್ರೀಯ ಭಾವೈಕ್ಯ, ಪಾರಂಪರಿಕ ಆಸ್ತಿಗಳ ಸಂರಕ್ಷಣೆ, ಮಹಿಳಾ ಸಬಲೀಕರಣ, ಸಮಾನತೆ, ಭಾರತದ ಸ್ವಾತಂತ್ರ್ಯ ಚಳವಳಿ, ಜಾನಪದ ಕಲೆ, ಸ್ವಚ್ಛ ಭಾರತ-ಸ್ವಚ್ಛ ಕರ್ನಾಟಕ, ಆರೋಗ್ಯ ಮತ್ತು ನೈರ್ಮಲ್ಯ ವಿಷಯಗಳ ಮೇಲೆ ನೃತ್ಯ ಪ್ರದರ್ಶಿಸಿ ಜಾಗೃತಿ ಮೂಡಿಸಲಿದ್ದಾರೆ ಎಂದರು. ಅ.14ರಂದು ಅರಮನೆಯಿಂದ ಬನ್ನಿಮಂಟಪದ ವರೆಗೆ ಮೆರವಣಿಗೆ ಆಯೋಜಿಸಲಾಗಿದ್ದು, ಯುವ ಸಂಭ್ರಮದಲ್ಲಿ ಹೆಜ್ಜೆ ಹಾಕಿದ ಕಲಾತಂಡಗಳು ಪಾಲ್ಗೊಳ್ಳಲಿವೆ. ಜಾನಪದ, ಕಂಸಾಳೆ ನೃತ್ಯ, ಡೊಳ್ಳು ಕುಣಿತ ಪ್ರದರ್ಶನವಿರಲಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅದಕ್ಕೆ ಸಿದ್ಧತೆ ಮಾಡಿಕೊಳ್ಳಿ ಎಂದರು. ಪೊಲೀಸ್ ರಹಿತ ದಸರಾ ಆಗಬೇಕು ಎನ್ನುವ ಉದ್ದೇಶದಿಂದ ಹೆಚ್ಚಿನ ಪೊಲೀಸರನ್ನು ನಿಯೋಜಿಸದಂತೆ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ ಎಂದರು. ಯುವ ದಸರೆಯ ಉಪಸಮಿತಿ ಕೂಡ ರಚಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳ ಸಹಯೋಗದಲ್ಲಿ ದಸರಾ ಜಂಬೂ ಸವಾರಿ ಮೆರವಣಿಗೆಗೆ ಉನ್ನತ ಶಿಕ್ಷಣವನ್ನು ಪ್ರತಿನಿಧಿಸುವ ಸ್ತಬ್ಧ ಚಿತ್ರವನ್ನು ನಿರ್ಮಿಸಲು ತೀರ್ಮಾನವನ್ನು ಸಭೆಯಲ್ಲಿ  ತೆಗೆದುಕೊಳ್ಳಲಾಯಿತು. ವಿಶ್ವೇಶ್ವರಯ್ಯ ತಾಮತ್ರಿಕ ವೀಸ್ವವಿದ್ಯಾನಿಲಯದ ನೇತೃತ್ವದಲ್ಲಿ ಸ್ತಬ್ಧ ಚಿತ್ರಗಳ ನಿರ್ಮಾಣವಾಗಬೇಕು ಎಂದರಲ್ಲದೇ, ಇತರ ಎಲ್ಲ 42ವಿವಿಗಳು ತಮ್ಮ ಸಲಹೆ ನೀಡುವಂತೆ ಸಚಿವರು ಸೂಚಿಸಿದರು. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಇದೇ ಮೊದಲ ಬಾರಿಗೆ ಉನ್ನತ ಶಿಕ್ಷಣ ಮಳಿಗೆ ತೆರೆಯಲಾಗುತ್ತಿದ್ದು, ಮಳಿಗೆಯಲ್ಲಿ 42ವಿಶ್ವವಿದ್ಯಾನಿಲಯಗಳೂ ತಮ್ಮ ಪ್ರದರ್ಶನ ನೀಡಬೇಕು. ಎಲ್ಲ ವಿಶ್ವವಿದ್ಯಾನಿಯಗಳಿಂದಲೂ 10ನಿಮಿಷಗಳ ವಿಡಿಯೋ ಪ್ರದರ್ಶನವಿರಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಯುವ ದಸರೆಯ ಉಪಸಮಿತಿ ಉಪ ವಿಶೇಷಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಕಾರ್ಯಾಧ್ಯಕ್ಷ, ಜಿಲ್ಲಾ ನೆಹರೂ ಯುವ ಕೇಂದ್ರದ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್, ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣ, ಪಾಲಿಕೆಯ ಆಯುಕ್ತ ಕೆ.ಹೆಚ್.ಜಗದೀಶ್ ಮತ್ತಿತರರಿದ್ದರು. (ಎಸ್.ಎಚ್)

Leave a Reply

comments

Related Articles

error: