
ಪ್ರಮುಖ ಸುದ್ದಿ
ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ಶುಭಕೋರಿದ ಮಂಡ್ಯದ ಜೆಡಿಎಸ್ ಶಾಸಕ ಬಿಜೆಪಿ ಖೆಡ್ಡಾಕ್ಕೆ ಬಿದ್ರಾ?
ರಾಜ್ಯ(ಮಂಡ್ಯ)ಸೆ.18:- ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ಮಂಡ್ಯದ ಜೆಡಿಎಸ್ ಶಾಸಕ ಸುರೇಶ್ ಗೌಡ ಶುಭಕೋರಿದ್ದು, ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಪ್ರಧಾನಿ ಮೋದಿಯವರಿಗೆ ಮಂಡ್ಯದ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಶುಭ ಹಾರೈಸಿದ್ದು, ಈ ಮೂಲಕ ಆಪರೇಶನ್ ಕಮಲದ ಖೆಡ್ಡಾದಲ್ಲಿ ಜೆಡಿಎಸ್ ಶಾಸಕ ಸುರೇಶ್ ಗೌಡ ಬಿದ್ದಿರೋ ಶಂಕೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಆಪರೇಶನ್ ಕಮಲದ ಹೊಸ್ತಿಲಲ್ಲಿ ಪ್ರಧಾನಿಗೆ ಶುಭಕೋರಿದ್ದು, ಮಾಜಿ ಪ್ರಧಾನಿ ದೇವೇಗೌಡರಿಗೆ ನಾಗಮಂಗಲ ಶಾಸಕ ಸುರೇಶ್ ಗೌಡ ಕೈ ಕೊಡ್ತಾರಾ ಎಂಬ ಅನುಮಾನಗಳೆದ್ದಿದೆ. ಪ್ರಧಾನಿ ಮೋದಿಯವರಿಗೆ ಹುಟ್ಟುಹಬ್ಬದ ಶುಭಕೋರುವ ಮೂಲಕ ಶಾಸಕ ಸುರೇಶ್ ಗೌಡರ ರಾಜಕೀಯ ನಡೆ ಕುತೂಹಲ ಮೂಡಿಸಿದೆ. (ಕೆ.ಸ್,ಎಸ್.ಎಚ್)