ಪ್ರಮುಖ ಸುದ್ದಿ

ಪತ್ನಿಯನ್ನು ಕೊಂದ ಪತಿ ಬಂಧನ ಭೀತಿಯಿಂದ ಆತ್ಮಹತ್ಯೆಗೆ ಶರಣು

ರಾಜ್ಯ(ಮಂಡ್ಯ),ಸೆ.18:- ಪತ್ನಿಯನ್ನು ಕೊಂದ ಪತಿಯೋರ್ವ  ಬಂಧನ ಭೀತಿಯಿಂದ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ಬಸಪ್ಪ (59) ಎಂದು ಗುರುತಿಸಲಾಗಿದೆ. ಈತ  ತನ್ನ  ಬಸಮಣಿ (50) ಎಂಬಾಕೆಯನ್ನು ನಿನ್ನೆ ರಾತ್ರಿ ಜಗಳ ಮಾಡುತ್ತ ಪತ್ನಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು‌ ಕೊಲೆ ಮಾಡಿದ್ದ. ಕೊಲೆ ಮಾಡಿದ ಬಳಿಕ ಮನೆಯಿಂದ ನಾಪತ್ತೆಯಾಗಿದ್ದ. ಪೊಲೀಸರ ಬಂಧನ‌ ಭೀತಿಯಿಂದ ಗ್ರಾಮದ ಹೊರವಲಯದ ಮರಕ್ಕೆ‌ ನೇಣು ಬಿಗಿದುಕೊಂಡು ಬಸಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಮಳವಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: