ಕ್ರೀಡೆ

ಏಷ್ಯಾ ಕಪ್ ಟೂರ್ನಿಯಿಂದ ಹೊರಬಿದ್ದ ಶ್ರೀಲಂಕಾ

ಅಬುಧಾಬಿ,ಸೆ.18-ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಿಂದ ಐದು ಬಾರಿ ಚಾಂಪಿಯನ್ ಆಗಿದ್ದ ಶ್ರೀಲಂಕಾ ತಂಡ ಹೊರಬಿದ್ದಿದೆ.

ಬಲಿಷ್ಠ ಶ್ರೀಲಂಕಾ ತಂಡದ ವಿರುದ್ಧ 91 ರನ್ ಗಳ ಜಯ ದಾಖಲಿಸಿದ ಅಫ್ಘಾನಿಸ್ತಾನ ತಂಡ ಶ್ರೀಲಂಕಾ ತಂಡವನ್ನು ಹೊರಗಟ್ಟುವ ಮೂಲಕ ದಾಖಲೆ ಸೃಷ್ಟಿಸಿತು.

ಟೂರ್ನಿಯಲ್ಲಿ ಉಳಿದುಕೊಳ್ಳಲು ಬಿ ಗುಂಪಿನ ಪಂದ್ಯದಲ್ಲಿ ಜಯ ಸಾಧಿಸುವುದು ಶ್ರೀಲಂಕಾಗೆ ಅನಿವಾರ್ಯವಾಗಿತ್ತು. ಆದರೆ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ಅದ್ಭುತ ಪ್ರದರ್ಶನ ತೋರಿದ ಅಫ್ಘನ್ನರು ಶ್ರೀಲಂಕಾವನ್ನು ಟೂರ್ನಿಯಿಂದ ಹೊರಗಟ್ಟಿದರು.

250 ರನ್ನುಗಳ ಗೆಲುವಿನ ಗುರಿ ಪಡೆದ ಶ್ರೀಲಂಕಾ ತಂಡಕ್ಕೆ ಸ್ಪಿನ್ನರ್ ರಶೀದ್ ಖಾನ್ (2-26), ಮುಹಮ್ಮದ್ ನಬಿ (2-30) ಮತ್ತು ಮುಜೀಬುರ್ರಹ್ಮಾನ್ (2-32) ಕಡಿವಾಣ ಹಾಕಿದರು. ಶ್ರೀಲಂಕಾ ತಂಡ 41.2 ಓವರ್ಗಳಲ್ಲಿ ಆಲೌಟ್ ಆಗಿ ಸೋಲನ್ನು ಒಪ್ಪಿಕೊಂಡಿತು.

ಎರಡು ಅನಗತ್ಯ ರನೌಟ್ ಹಾಗೂ ನಾಯಕ ಆಯಂಜೆಲೊ ಮ್ಯಾಥ್ಯೂಸ್ ಅವರ ಬೇಜವಾಬ್ದಾರಿಯುತ ಹೊಡೆತದಿಂದ ಅಗ್ಗದ ಮೊತ್ತ (22)ಕ್ಕೆ ಪೆವಿಲಿಯನ್ಗೆ ನಡೆಯುವುದರೊಂದಿಗೆ ಒತ್ತಡಕ್ಕೆ ಸಿಲುಕಿದ ಶ್ರೀಲಂಕಾ ತಂಡ ಚೇತರಿಸಿಕೊಳ್ಳಲು ಅಫ್ಘಾನ್ ಬೌಲರ್ಗಳು ಅವಕಾಶ ನೀಡಲಿಲ್ಲ.

ಏಕದಿನ ಪಂದ್ಯದ ಇತಿಹಾಸದಲ್ಲಿ ಇದು ಅಪ್ಘಾನ್ ತಂಡ ಶ್ರೀಲಂಕಾ ವಿರುದ್ಧ ಸಾಧಿಸಿದ ಮೊಟ್ಟಮೊದಲ ಜಯವಾಗಿದೆ. 2017 ಜನವರಿಯಿಂದೀಚೆಗೆ ನಡೆದ 40 ಪಂದ್ಯಗಳ ಪೈಕಿ 30 ಪಂದ್ಯಗಳನ್ನು ಸೋತಿರುವ ಶ್ರೀಲಂಕಾ, ಕಳೆದ ಶನಿವಾರ ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ 137 ರನ್ನುಗಳ ಹೀನಾಯ ಸೋಲು ಕಂಡಿತ್ತು. (ಎಂ.ಎನ್)

Leave a Reply

comments

Related Articles

error: