ಮನರಂಜನೆ

ಗಾಸಿಪ್ ಬಗ್ಗೆ ಮೌನ ಮುರಿದ ನಟಿ ರಶ್ಮಿಕಾ ಮಂದಣ್ಣ

ಬೆಂಗಳೂರು,ಸೆ.18-ನಟಿ ರಶ್ಮಿಕಾ ಮಂದಣ್ಣ ತಮ್ಮ ವಿರುದ್ಧ ಹರಿದಾಡುತ್ತಿರುವ ಗಾಸಿಪ್ ಸುದ್ದಿಗಳ ಬಗ್ಗೆ ಕೊನೆಗೂ ಮೌನ ಮುರಿದಿದ್ದು, ಸಾಮಾಜಿಕ ಜಾಲತಾಣದ ಮೂಲಕ ಇದಕ್ಕೆ ಉತ್ತರ ನೀಡಿದ್ದಾರೆ.

ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಂ ಮೂಲಕ ಗಾಸಿಪ್ ಸುದ್ದಿಗಳಿಗೆ ರಶ್ಮಿಕಾ ಸ್ಪಷ್ಟನೆ ನೀಡಿದ್ದಾರೆ. `ತುಂಬಾ ಸಮಯದಿಂದ ಮೌನವಹಿಸಿದ್ದಕ್ಕೆ ಕ್ಷಮೆ ಇರಲಿ. ನನ್ನ ಬಗ್ಗೆ ಸಾಕಷ್ಟು ಕಥೆಗಳು, ಲೇಖನಗಳು, ಕಾಮೆಂಟ್ಸ್ ಮತ್ತು ಟ್ರೋಲ್ಸ್ ಬರುತ್ತಿವೆ. ಇದರಿದ ನನಗೆ ಸಾಕಷ್ಟು ತೊಂದರೆಯಾಗಿದೆ. ನಮ್ಮನ್ನು ನನ್ನ ಪಾಡಿಗೆ ಕೆಲಸ ಮಾಡಲು ಬಿಡಿ. ಹಾಗಂತ ನಾನು ನಿಮ್ಮನ್ನು ದೂರಲ್ಲ. ಪ್ರತಿಯೊಂದು ನಾಣ್ಯಕ್ಕೂ ಎರಡು ಮುಖಗಳಿರುವಂತೆ ಪ್ರತಿ ಕಥೆಗೂ ಎರಡು ಆಯಾಮಗಳಿರುತ್ತವೆ. ನಾನು ಇಲ್ಲಿ ಯಾವುದನ್ನೂ ಸಮರ್ಥಿಸಿಕೊಳ್ಳುತ್ತಿಲ್ಲ. ನಾನು ಕನ್ನಡ ಚಿತ್ರಗಳಲ್ಲೇ ಮುಂದುವರೆಯುತ್ತೇನೆ. ಹಾಗೆಯೇ ಅದು ಯಾವುದೇ ಭಾಷೆಯಾಗಲಿ, ಯಾವುದೇ ಚಿತ್ರೋದ್ಯಮವಾಗಲಿ, ಅತ್ಯುತ್ತಮವಾದದ್ದನ್ನೇ ನೀಡುತ್ತೇನೆ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಸ್ಯಾಂಡಲ್ವುಡ್ ತೊರೆಯುತ್ತಾರೆ, ಇನ್ನು ಅವರು ಟಾಲಿವುಡ್ನಲ್ಲೇ ನೆಲೆ ನಿಲ್ಲಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಹರಿದಾಡಿದ್ದವು. ಇದಕ್ಕೆ ಸಂಬಂಧಿಸಿದಂತೆ ರಶ್ಮಿಕಾರನ್ನು ಟ್ರೋಲ್ ಸಹ ಮಾಡಲಾಗಿತ್ತು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಉತ್ತರ ನೀಡಿರುವ ಅವರು ತಾನು ಸ್ಯಾಂಡಲ್ವುಡ್ ಬಿಡಲ್ಲ. ಇಲ್ಲೇ ಉಳಿಯುತ್ತೇನೆ ಎಂದು ಸ್ಪಷ್ಪಪಡಿಸಿದ್ದಾರೆ.

ರಶ್ಮಿಕಾ ಕನ್ನಡದವೃತ್ರಚಿತ್ರದಿಂದ ಹೊರಬಂದ ಬಗ್ಗೆಯೂ ರಶ್ಮಿಕಾ ಬರೆದುಕೊಂಡಿದ್ದರು. ಕಾರಣಾಂತರಗಳಿಂದ ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಾಗುತ್ತಿಲ್ಲ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಪೋಸ್ಟ್ ಮಾಡಿದ್ದರು. ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆಗೆ ಯಜಮಾನ ಚಿತ್ರದಲ್ಲಿ ರಶ್ಮಿಕಾ ಅಭಿನಯಿಸುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: