ಮೈಸೂರು

ಸೆ.21ರಿಂದ ಪ್ರಾಣಾಯಾಮ ಸರಳ ಯೋಗಾಸನ ಶಿಬಿರ : ಪ್ರಹ್ಲಾದ

ಮೈಸೂರು,ಸೆ.18 : ಆರ್.ಟಿ.ನಗರದ ಓಂ ಯೋಗ ಪ್ರತಿಷ್ಠಾನದ ವತಿಯಿಂದ ಪ್ರಾಣಾಯಾಮ ಹಾಗೂ ಸರಳ ಯೋಗಾಸನ ಶಿಬಿರವನ್ನು ಸೆ.21 ರಿಂದ 30ರವರೆಗೆ ಸರಸ್ವತಿಪುರಂನ ವಿಜಯ ವಿಠ್ಠಲ ವಿದ್ಯಾಲಯದಲ್ಲಿ ಪ್ರತಿದಿನ ಬೆಳಗ್ಗೆ 5 ರಿಂದ 7 ಗಂಟೆಯವರೆಗೆ ನಡೆಸಲಾಗುವುದು ಎಂದು ಪ್ರತಿಷ್ಠಾನದ ಯೋಗ ಗುರುಗಳಾದ ಪ್ರಹ್ಲಾದ ತಿಳಿಸಿದರು.

ಮಂಗಳವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ಕಾಯಲೆಗಳಿಗೆ ಸಿದ್ಧೌಷಧವಾಗಿರುವ ಸನಾತನ ಯೋಗ ಪದ್ಧತಿಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಸಂಸ್ಥೆಯು ಈ ಶಿಬಿರವನ್ನು ಏರ್ಪಡಿಸಿದ್ದು ಸುಮಾರು 400 ಹೆಚ್ಚು ಮಂದಿ ಶಿಬಿರದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.

ಗ್ಯಾಸ್ಟ್ರಿಕ್, ಮಧುಮೇಹ, ರಕ್ತದೊತ್ತಡ, ಅಸ್ತಮಾ, ಮೈಗ್ರೇನ್, ಅರ್ಜೀರ್ಣ, ಚರ್ಮದ ಕಾಯಿಲೆ, ಕೀಲು ನೋವು, ಥೈರಾಯಿಡಿ, ಸ್ತ್ರೀ ರೋಗ ಸಮಸ್ಯೆಗಳು, ನಿರಂತರ ಕಾಡುವ ಸೋಂಕುಗಳು ಸೇರಿದಂತೆ ಮಾನಸಿಕ ಕಾಯಿಲೆಗಳನ್ನು ನಿಯಂತ್ರಿಸುವ ಶಕ್ತಿ ಯೋಗ ಮತ್ತು ಪ್ರಾಣಾಯಾಮಕ್ಕಿದೆ, ಇಂತಹ ಅದ್ಭುತ ವಿದ್ಯೆಯನ್ನು ಜೀವನಕ್ರಮದಲ್ಲಿ ಅಳವಡಿಸಿಕೊಳ್ಳವು ಮೂಲಕ ಆರೋಗ್ಯಪೂರ್ಣ ಜೀವನ ನಡೆಸಬಹುದಾಗಿದೆ ಎಂದು ತಿಳಿಸಿದರು.

ಈ ನಿಟ್ಟನಲ್ಲಿ ಕಳೆದ ಬಾರಿ ಆಯೋಜಿಸಿದ್ದ ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರು ಸದುಪಯೋಗಪಡಿಸಿಕೊಂಡಿದ್ದರು, ಪ್ರಸ್ತುತ ಶಿಬಿರದಲ್ಲಿ ಇನ್ನೂ ಹೆಚ್ಚಿನ ಜನರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ ಅವರು, ಗುರುಗಳ ಮಾರ್ಗದರ್ಶನದಲ್ಲಿ ಶಾಸ್ತ್ರೋಕ್ತ ಯೋಗಾಭ್ಯಾಸ ಮಾಡುವುದರಿಂದ ತ್ವರಿತವಾಗಿ ಲಾಭ ಪಡೆಯಬಹುದಾಗಿದೆ ಎಂದು ಹೇಳಿದರು.

ಯೋಗಾ ಸಂಚಾಲಕರಾದ ಗುರುಸಿದ್ಧಯ್ಯ, ನಾಗೇಂದ್ರ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: