ಮನರಂಜನೆಮೈಸೂರು

ನೈಜತೆಯನ್ನು ತಾಳಿದ ಚಿತ್ರ ‘ನಡುವೆ ಅಂತರವಿರಲಿ’ : ನಟಿ ಐಶಾನಿ ಶೆಟ್ಟಿ

ಮೈಸೂರು,ಸೆ.18:- ಯುವ ಮನಸುಗಳ ಮನದಲ್ಲರಳುವ ಪ್ರೇಮದ ನವಿರಾದ ಭಾವನೆಗಳ ಕಥಾ ಹಂದರವಿರುವ ಚಿತ್ರ ‘ನಡುವೆ  ಅಂತರವಿರಲಿ’ ನೈಜತೆಯನ್ನು ಹೊಂದಿರುವ ಚಿತ್ರವಾಗಿದೆ ಎಂದು ಚಿತ್ರದ ನಾಯಕಿ, ನಟಿ ಐಶಾನಿ ಶೆಟ್ಟಿ ಹೇಳಿದರು.

ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿಂದು ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ವತಿಯಿಂದ ‘ನಡುವೆ ಅಂತರವಿರಲಿ’ ಚಿತ್ರ ತಂಡದೊಂದಿಗೆ ಸಂವಾದಕಾರ್ಯಕ್ರಮ ಮತ್ತು ಟ್ರೇಲರ್ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚಿತ್ರ ನೈಜತೆಯನ್ನು ಹೊಂದಿದ್ದು, ಭಾವನಾತ್ಮಕವಾಗಿ ಹೆಣೆಯಲಾಗಿದೆ. ನಾನು ಕೂಡ ಸಮೂಹ ಸಂವಹನದ ವಿದ್ಯಾರ್ಥಿನಿಯೇ ಆಗಿದ್ದೇನೆ. ಪ್ರತಿಯೊಂದು ದೃಶ್ಯವನ್ನೂ ಅರ್ಥಮಾಡಿಕೊಳ್ಳಲು ಚಲನಚಿತ್ರವನ್ನು ಹತ್ತು ಬಾರಿ ನೋಡುತ್ತಿದ್ದೆ ಎಂದರು. ಚಿತ್ರಕಥೆ ಇಂದಿನ ಪೀಳಿಗೆಗೆ ಸಂಬಂಧಿಸಿದ್ದೇ ಆಗಿದೆ. ಸುಂದರವಾದ ಪ್ರೇಮಕಥೆಯನ್ನು ಹೊಂದಿದೆ. ಭಾವನಾತ್ಮಕವಾದ ಅಂಶಗಳೂ ಚಿತ್ರದಲ್ಲಿದ್ದು, ನೈಜತೆಯನ್ನು ತಾಳಿದೆ ಎಂದರು. ‘ಶಕುಂತಲೆ ಸಿಕ್ಕಳು, ಸುಮ್ ಸುಮ್ನೆ ನಕ್ಕಳು’ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಸಖತ್ ಸದ್ದು ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ಎಂ.ಎಸ್.ಸ್ವಪ್ನಾ, ಪುಟ್ಟಸ್ವಾಮಿ, ವಿಭಾಗದ ಮುಖ್ಯಸ್ಥರಾದ ಪ್ರೊ.ಬಿ.ಪಿ.ಮಹೇಶ್ಚಂದ್ರಗುರು, ಚಿತ್ರ ನಿರ್ದೇಶಕರಾದ ರವೀನ್ ಕುಮಾರ್, ನಟ ಪ್ರಖ್ಯಾತ್ ಪರಮೇಶ್, ಸಹಕಲಾವಿದರಾದ ಅರುಣ್, ಸುಹಾಸ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: