ಮೈಸೂರು

ಮುಂದುವರೆದ “ಆಪರೇಷನ್ ಸ್ವಾನ್”: ವೃತ್ತಿಪರತೆ ಹೆಚ್ಚಿಸಿಕೊಳ್ಳಲು ನಗರದ ಸಂಚಾರ ಪೊಲೀಸರಿಂದ ವಾಕಥಾನ್

ಮೈಸೂರು,ಸೆ.18:- ಮೈಸೂರು ನಗರದ ಸಂಚಾರ ಪೊಲೀಸರನ್ನು ಹೆಚ್ಚು ಜನಸ್ನೇಹಿ ಮತ್ತು ಪ್ರವಾಸಿಗರ ಸ್ನೇಹಿ ಪೊಲೀಸರನ್ನಾಗಿಸಿ ಅವರ ವೃತ್ತಿಪರತೆಯನ್ನು ಹೆಚ್ಚಿಸಿ ಅವರಿಂದ ಉತ್ತಮ ಸಂಚಾರ ನಿಯಂತ್ರಣ ಮತ್ತು ಜಾರಿ ಕಾರ್ಯವನ್ನು ಮಾಡಿಸುವ ಉದ್ದೇಶದಿಂದ “ಅಪರೇಷನ್ ಸ್ವಾನ್” ಆರಂಭಿಸಲಾಗಿದೆ.

ನಿನ್ನೆ ಸುಮಾರು 250 ಜನ ಸಂಚಾರ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ನಗರದ ಪೊಲೀಸ್ ಕಂಟ್ರೋಲ್ ರೂಂ ಸಿಬ್ಬಂದಿಗಳು ಬೆಳಿಗ್ಗೆ 5.45 ಕ್ಕೆ ತಾವರೆಕಟ್ಟೆಯಿಂದ ಕಾಲ್ನಡಿಗೆಯಲ್ಲಿ  ಚಾಮುಂಡಿಬೆಟ್ಟಕ್ಕೆ ತೆರಳಿದ್ದು, ಚಾಮುಂಡಿ ಬೆಟ್ಟದಲ್ಲಿ  ಇವರಿಗಾಗಿ ಕಾರ್ಯಗಾರವನ್ನು ಏರ್ಪಿಡಿಸಲಾಗಿತ್ತು. ಕಾರ್ಯಾಗಾರದಲ್ಲಿ  ಸಂಪನ್ಮೂಲ ವ್ಯಕ್ತಿಗಳಾಗಿ ಚಂದ್ರಶೇಖರನ್, ಫಿಟ್ನೆಸ್ ಟ್ರೈನರ್, ಮೈಸೂರು ಭಾಗವಹಿಸಿ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೇಗೆ ಸದೃಢವಾಗಿ ಇಟ್ಟುಕೊಳ್ಳಬೇಕು. ದಿನನಿತ್ಯ ಸೇವಿಸುವ ಆಹಾರ ಪದ್ಧತಿ, ವಯಸ್ಸು ಮತ್ತು ದೇಹದ ಸ್ಥಿತಿಗೆ ಅನುಗುಣವಾಗಿ ಮಾಡಬೇಕಾದ ವ್ಯಾಯಾಮಗಳ ಕುರಿತು ವಿವರವಾಗಿ ತಿಳುವಳಿಕೆ ನೀಡಿದರು.

ಮೈಸೂರು ನಗರದ ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ವಿಭಾಗದ ಡಿ.ಸಿ.ಪಿ. ಡಾ ವಿಕ್ರಂ ವಿ ಅಮಟೆ ಅಧ್ಯಕ್ಷತೆ  ಮತ್ತು ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಇಂತಹ ಋಣಾತ್ಮಕ ಕಾರ್ಯಕ್ರಮಗಳು ಇನ್ನು ಮುಂದೆಯೂ ಸಹ ನಡೆಯಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: