ಮೈಸೂರು

ಹೆಣ್ಣು ಭ್ರೂಣ ಹತ್ಯೆ ಖಂಡಿಸಿ ಜಾಗೃತಿ ಜಾಥಾ

ಮೈಸೂರು,ಸೆ.18:- ಹೆಣ್ಣು ಭ್ರೂಣ ಹತ್ಯೆಯನ್ನು ಖಂಡಿಸಿ ಇಂದು ಜಾಗೃತಿ ಜಾಥಾವನ್ನು ಆಯೋಜಿಸಲಾಗಿತ್ತು. ನಗರದ ಮಹಾರಾಣಿ ಕಾಲೇಜು ಆವರಣದಲ್ಲಿ ನಡೆದ ಜಾಥಾದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಪಾಲ್ಗೊಂಡು ಜಾಗೃತಿ ಮೂಡಿಸಿದರು.

ಇತ್ತೀಚಿನ ದಿನಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗುತ್ತಿದ್ದು ಅದನ್ನು ತಡೆಗಟ್ಟು ನಿಟ್ಟಿನಲ್ಲಿ ಜಾಗೃತಿ ಅವಶ್ಯಕವಿದೆ. ಆದ್ದರಿಂದ ಮೊದಲಿಗೆ ಮೈಸೂರು ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರಿಂದಲೇ ಜಾಗೃತಿ ಪ್ರಾರಂಭ ಮಾಡುತ್ತಿದ್ದೇವೆ. ಮುಂದೆ ಎಲ್ಲಾ ಕಡೆಯಲ್ಲೂ ಈ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳುತ್ತೇವೆ ಎಂದು ಜಾಗೃತಿ ಜಾಥಾ ಆಯೋಜಕರಾದ ಮನೋನ್ಮಣಿ ತಿಳಿಸಿದರು.

ನಂತರ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿ  ಮಣಿ ಮಾತನಾಡಿ ಇವತ್ತಿನ ದಿನದಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗಿದ್ದು ಎಲ್ಲೋ ಒಂದು ಕಡೆ ಹೆಣ್ಣು ಭ್ರೂಣ ಗಳನ್ನು ನಾಯಿಗೆ ಬಿಸ್ಕತ್ತು ಎಸೆದ ಹಾಗೆ ಎಸೆದಿದ್ದನ್ನು ನಾವು ಕೇಳಿದ್ದೇವೆ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದರು. ಪ್ರಮುಖ ಬೀದಿಗಳಲ್ಲಿ ಜಾಥಾ ಸಾಗಿ ಅರಿವು ಮೂಡಿಸಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: