ಮೈಸೂರು

ಸೆ.22 : ಮೃಗಾಲಯದಲ್ಲಿ ವಿಶ್ವ ಘೇಂಡಾಮೃಗ ದಿನಾಚರಣೆ

ಮೈಸೂರು,ಸೆ.18:- ಘೇಂಡಾ ಮೃಗಗಳ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ಮತ್ತು ಜ್ಞಾನವನ್ನು ಪಸರಿಸುವ ದೃಷ್ಟಿಯಿಂದ ಸೆ.22ರಂದು ವಿಶ್ವ ಘೇಂಡಾಮೃಗ ದಿನವನ್ನು ಆಚರಿಸಲಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ನಗರೀಕರಣ, ವಾತಾವರಣದ ಮಾಲಿನ್ಯ ಮತ್ತು ಮಾನವನ ಭೇಟಿಯಿಂದಾಗಿ ಘೇಂಡಾಮೃಗಗಳು ಅಪಾಯವನ್ನು ಎದುರಿಸುತ್ತಿವೆ. ಕೆಲವು ಪ್ರಭೇದದ ಘೇಂಡಾಮೃಗಗಳು ಅಳಿವಿನಂಚಿನಲ್ಲಿವೆ. 20ನೇ ಶತಮಾನದ ಪ್ರಾರಂಭದಲ್ಲಿ 5.00ಲಕ್ಷಗಳಷ್ಟು ಸಂಖ್ಯೆಯಲ್ಲಿ ಅರಣ್ಯದಲ್ಲಿ ಸಂಚರಿಸುತ್ತಿದ್ದ ಘೇಂಡಾಮೃಗಗಳು 1970ನೇ ಇಸ್ವಿಯಲ್ಲಿ ವಿಶ್ವದಲ್ಲೇ 70,000ಸಂಖ್ಯೆಯಲ್ಲಿದ್ದು, ಇದೀಗ ಕೇವಲ 29,000ಸಂಖ್ಯೆಗೆ ಇಳಿದಿದೆ.

ವರ್ಲ್ಡ್  ವೈಲ್ಡ್ ಲೈಫ್ ಫಂಡ್-ಸೌತ್ ಆಫ್ರಿಕಾ ವತಿಯಿಂದ ವಿಶ್ವದಲ್ಲೇ ಪ್ರಥಮ ಬಾರಿಗೆ 2010ನೇ ಇಸ್ವಿಯಲ್ಲಿ ವಿಶ್ವ ಘೇಂಡಾಮೃಗ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ನಂತರ ಲಿಸಾ ಜೇನ್ ಕ್ಯಾಂಬಲ್ ಮತ್ತು ರಿಶ್ಜಾ ಲಾರ್ಸನ್ ಇವರುಗಳು ಸೇರಿ ವಿಶ್ವ ಘೇಂಡಾಮೃಗ ದಿನಾಚರಣೆಯನ್ನು ಸೆ.22,2011ರಲ್ಲಿ ಆಚರಿಸಲು ಉತ್ತೇಜಿಸಿದರು. ಅಂದಿನಿಂದ ಸರ್ಕಾರಗಳು, ಪ್ರಾಣಿ ಹಕ್ಕು ಸಂಸ್ಥೆಗಳು ಹಾಗೂ ಪ್ರಾಣಿ ಉತ್ಸಾಹಿಗಳು ಪ್ರತಿವರ್ಷ ಸೆ.22ರಂದು ವಿಶ್ವ ಘೇಂಡಾಮೃಗ ದಿನಾಚರಣೆಯನ್ನಾಚರಿಸುತ್ತಿವೆ. ಸೆ.22ರಂದು ಘೇಂಡಾಮೃಗ ದಿನಾಚರಣೆಯನ್ನು ಆಚರಿಸಲು ಶ್ರೀ ಚಾಮರಾಜೇಂದ್ರ ಮೃಗಾಲಯವು ಸೂಕ್ತ ರೀತಿಯ ಕ್ರಮ ಕೈಗೊಂಡಿದೆ. ಅಂದು ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ಘೇಂಡಾಮೃಗದ ಬಗ್ಗೆ ಮಾಹಿತಿಯುಳ್ಳ ಆಕರ್ಷಕ ಫಲಕಗಳು ಮತ್ತು ಸತ್ಯ ಸಂಗತಿಗಳು, ವಿವರಗಳನ್ನು ಘೇಂಡಾಮೃಗ ಪ್ರಾಣಿ ಆವರಣದ ಎದುರು ಪ್ರದರ್ಶಿಸಲಾಗುವುದು. ಅಂದು ಅವುಗಳಿಗೆ ಆಹಾರ ನೀಡುವಿಕೆಯ ಪ್ರಕ್ರಿಯೆನ್ನು ಕೂಡ ಗಮನಿಸಬಹುದು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: