ಸುದ್ದಿ ಸಂಕ್ಷಿಪ್ತ

ವಿವಿಧ ಸಹಕಾರ ಸಂಘಗಳ ಸರ್ವ ಸದಸ್ಯರ ಸಭೆ

ಮೈಸೂರು,ಸೆ.18 : ದಿ ಮೈಸೂರು ಸಿಟಿ ಶ್ರೀ ಶಿವಛತ್ರಪತಿ ಸಹಕಾರ ಸಂಘ ಸಮಾಜ ನಿಯಮಿತ – ಈ ಸಂಘದ ಸರ್ವ ಸದಸ್ಯರ ಸಭೆಯನ್ನು ಸೆ.22ರ ಬೆಳಗ್ಗೆ 10 ಗಂಟೆಗೆ ದೇವರಾಜು ಅರಸು ರಸ್ತೆಯ ಲೋಕಾಭಿರಾಮ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ.

ಸಮಾಜದ ಅಧ್ಯಕ್ಷ ಎನ್.ಗೋಪಾಲರಾವ್ ಅಧ್ಯಕ್ಷತೆ ವಹಿಸಲಿದ್ದರು, ಸದಸ್ಯರು ಕಡ್ಡಾಯವಾಗಿ ಹಾಜರಾಗಬೇಕೆಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

ಮೈಸೂರು ಪ್ರಾಂತಿಯ ಇಂಜಿನಿಯರುಗಳ ಹಾಗೂ ತಾಂತ್ರಿಕೇತರ ನೌಕರರ ಗೃಹನಿರ್ಮಾಣ ಸಹಕಾರ ಸಂಘ ನಿ :.ದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಸೆ.23 ರಂದು ಬೆಳಗ್ಗೆ 11 ಮಾರಶೆಟ್ಟಿ ಹಳ್ಳಿಯ ಇಂಜಿನಿಯರ್ಸ್ ಎನ್ ಕ್ಲೇವ್  ಉದ್ದೇಶಿತ ಬಡಾವಣೆಯಲ್ಲಿ ಏರ್ಪಡಿಸಲಾಗಿದೆ. ಸದಸ್ಯರು ತಪ್ಪದೇ ಹಾಜರಾಗಬೇಕೆಂದು ಕೋರಲಾಗಿದೆ.

ಶ್ರೀ ಶಾರದ ಪತ್ತಿನ ಸಹಕಾರ ಸಂಘ  ನಿ : ಸೆ.23ರ ಬೆಳಗ್ಗೆ 10.30ಕ್ಕೆ ಆದಿಚುಂಚನಗಿರಿ ರಸ್ತೆಯಲ್ಲಿರುವ ವೀಣೆ ಶೇಷಣ್ಣ ಭವನದಲ್ಲಿ. ಅಧ್ಯಕ್ಷ ಟಿ.ಎನ್.ರಾಮದಾಸ್ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಚಂದ್ರಶೇಖರಯ್ಯ ತಿಳಿಸಿದ್ದಾರೆ.

ನ್ಯಾಯಾಂಗ ಇಲಾಖಾ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ : ಸೆ.21ರಂದು ಬೆಳಗ್ಗೆ 11 ಗಂಟೆಗೆ ಚಾಮರಾಜಪುರಂನ ಶ್ರೀ ಪ್ರಸನ್ನ ವಿಶ್ವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಂಘದ ಸರ್ವ ಸದಸ್ಯರ ಸಭೆ ನಡೆಯಲಿದೆ. ಸಂಘದ ಅಧ್ಯಕ್ಷ ಸಿ.ಶೇಷಯ್ಯ ಅಧ್ಯಕ್ಷತೆ ವಹಿಸುವರು.ಸದಸ್ಯರು ಕಡ್ಡಾಯವಾಗಿ  ಹಾಜರಾಗಬೇಕೆಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಶಶಿಕಲ ಪ್ರಕಟಣೆಯಲ್ಲಿ ಕೋರಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: