ಮೈಸೂರು

ಮೃಗಾಲಯದಲ್ಲಿ ಕಾಡುಬೆಕ್ಕು ಸಾವು

ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಗಿಣಿ ಜಾತಿಗೆ ಸೇರಿದ ಎರಡು ಪಕ್ಷಿಗಳು ಹಾಗೂ ಕಾಡುಬೆಕ್ಕು ಮೃತಪಟ್ಟಿವೆ.

ಕಳೆದ ಒಂದೂವರೆ ತಿಂಗಳಿನಲ್ಲಿ ಸತ್ತ ಪ್ರಾಣಿಗಳ ಸಂಖ್ಯೆ ಎಂಟಕ್ಕೇರಿದೆ. ಕಳೆದ ಕೆಲದಿನಗಳ ಹಿಂದಷ್ಟೇ ಕಾಳಿಂಗಸರ್ಪ, ಗಿಡ್ಡಜಾತಿಯ ಕಾಂಗರೂ, ಝೀಬ್ರಾ, ಕಾಡೆಮ್ಮೆ, ಕಾಳಿಂಗಸರ್ಪ, ಸಿಂಗಳೀಕ ಮೃತಪಟ್ಟಿದ್ದವು.

ಪ್ರಾಣಿಗಳ ಸಾವಿಗೆ ಅನಾರೋಗ್ಯವೇ ಕಾರಣ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕೆ.ಕಮಲಾ ತಿಳಿಸಿದ್ದಾರೆ.

ಏತನ್ಮಧ್ಯೆ ಸಾರಂಗ, ಜಿಂಕೆ, ತೋಳ, ಕಾಡುನಾಯಿಗಳು ಮರಿ ಹಾಕಿರುವುದು,ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ.

Leave a Reply

comments

Related Articles

error: