ಮೈಸೂರು

ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾಗೃತಿ, ತರಬೇತಿ ಶಿಬಿರ

ಮೈಸೂರು,ಸೆ.18-ನಗರದ ಗೋಕುಲಂನಲ್ಲಿರುವ ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕವು ಒಂದು ದಿನದ ಜಾಗೃತಿ ಮತ್ತು ತರಬೇತಿ ಶಿಬಿರವನ್ನು ಹಮ್ಮಿಕೊಂಡಿತ್ತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಅಂತಾರಾಷ್ಟ್ರೀಯ ಆಯುಕ್ತ ಪಿ.ವಿಶ್ವನಾಥ್, ಜಿಲ್ಲಾ ಸಹಾಯಕ ಆಯುಕ್ತರಾದ ಎಂ.ವಿ.ಅಮರ್ ನಾಥ್, ಜಿಲ್ಲಾ ಸಾಂಸ್ಥಿಕ ಆಯುಕ್ತ ಅಜಯ್ ಕುಮಾರ್ ಜೈನ್, ಜಿಲ್ಲಾ ಸಂಘಟಕ ರಾಮ್ ಪ್ರಸಾದ್, ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಶಿವಲಿಂಗೇಗೌಡ, ಕಾಲೇಜಿನ ಅಧ್ಯಾಪಕರು, ಅಧ್ಯಾಪಕೇತರ ವರ್ಗದವರು ಹಾಜರಿದ್ದರು. (ಎಂ.ಎನ್)

 

Leave a Reply

comments

Related Articles

error: