ಪ್ರಮುಖ ಸುದ್ದಿ

ದುಪ್ಪಟ್ಟು ಹಣ ತೆಗೆದುಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ನಟಿಯ ಮೇಲೆ ಹಲ್ಲೆ

ರಾಜ್ಯ(ಬೆಂಗಳೂರು)ಸೆ.19:- ಆಟೋ ಚಾಲಕನೋರ್ವ ದುಪ್ಪಟ್ಟು ಹಣ ತೆಗೆದುಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ನಟಿಯ ಮೇಲೆಯೇ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ.

‘ಬ್ಲಡ್ ಸ್ಟೋರಿ’ಚಿತ್ರದ ನಾಯಕಿ ಆಶ್ರಿನ ಮೆಹ್ತಾ ಆಟೋ ಚಾಲಕನಿಂದ ಹಲ್ಲೆಗೊಳಗಾದ ನಟಿಯಾಗಿದ್ದಾರೆ. ಯಾಕೆ ದುಪ್ಪಟ್ಟು ಹಣ ತೆಗೆದುಕೊಳ್ಳುತ್ತಿದ್ದೀರಿ. ಸರಿಯಾದ ಚಾರ್ಜ್ ತೆಗೆದುಕೊಳ್ಳಿ ಎಂದಿದ್ದಕ್ಕೆ ನಟಿಯ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ಎಸ್.ಎಚ್)

Leave a Reply

comments

Related Articles

error: