ಪ್ರಮುಖ ಸುದ್ದಿಮೈಸೂರು

ಪುಸ್ತಕಗಳಿಲ್ಲ, ಪದಕೋಶವಿಲ್ಲ ನೀಟ್ ಬರೆಯುವುದು ಹೇಗೆ ..?! : ಸಂಸದ ಪ್ರತಾಪ್ ಸಿಂಹ

ಸರ್ಕಾರ ನೀಟ್ ಪರೀಕ್ಷೆ  ಕನ್ನಡದಲ್ಲಿ ಬರೆಯಲು ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲೂ ಅನುಕೂಲ ಮಾಡಿಕೊಟ್ಟಿಲ್ಲ.  ಅನುಕೂಲವಾಗುವಂತಹ ಪುಸ್ತಕಗಳಿಲ್ಲ, ತರಬೇತಿ ಇಲ್ಲ, ಕನಿಷ್ಠ ಪದಕೋಶದ ಅನುವಾದ ನಡೆದಿಲ್ಲ ಹೀಗಿದ್ದಾಗ ಯಾವ ಆಧಾರದ ಮೇಲೆ ಮಹತ್ವ ಪೂರ್ಣ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಸಾಧ್ಯ ಎಂದು  ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.

ಅವರು ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿ ‘ನೀಟ್’ ಕನ್ನಡ ವಿಷಯವಾಗಿ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ಹರಿದಾಡಿದ ನಂತರ ಎಚ್ಚೆತ್ತ ಸರ್ಕಾರ ಕೇವಲ ಮೂರುದಿನಗಳು ಬಾಕಿ ಇರುವಾಗ ಕ್ರಮಜರುಗಿಸಲು ಕೇಂದ್ರಕ್ಕೆ ನಾಮಕಾವಸ್ಥೆ ಪತ್ರ ಬರೆದಿದೆ ಎಂದು ದೂರಿ ಮುಖ್ಯಮಂತ್ರಿಗಳು ಪೂರ್ವಾಗ್ರಹ ಪೀಡಿತರಾಗಿ ಕೇಂದ್ರ ಸರ್ಕಾರವನ್ನು ಸದಾ ದೂರುತ್ತಿರುವರು ಎಂದರು.

ಇಷ್ಟು ವರ್ಷದಿಂದಲೂ ಸಿಇಟಿ ನಡೆದಿದೆ, ಇಂದಿನವರೆಗೂ ಕನ್ನಡ ಪ್ರಶ್ನೆ ಪತ್ರಿಕೆ ಬಂದಿಲ್ಲ, ಪುಸ್ತಕಗಳಿರಲಿ ವೈಜ್ಞಾನಿಕ ಪದಸಂಗ್ರಹವೇ ಇಲ್ಲವೆಂದ ಮೇಲೆ ವಿದ್ಯಾರ್ಥಿಗಳು ತೊಂದರೆಗೀಡಾಗುವರು.

ಕುವೆಂಪುರವರು ಕನ್ನಡದಲ್ಲಿ ವೈದ್ಯಕೀಯ ಪುಸ್ತಕಗಳನ್ನು ಪ್ರಕಟಿಸಿ, ಅನುವಾದಿಸಿ ಎಂದು ತಿಳಿಸಿದರು. ಅವರ ಅದೇಶದಂತೆ ನಡೆದಿದ್ದರೆ ಇಂದು ಕನ್ನಡದಲ್ಲಿ ನೀಟ್ ಬರೆಯಲು ವಿದ್ಯಾರ್ಥಿಗಳು ಸಮರ್ಥರಾಗಿರುತ್ತಿದ್ದರು ಎಂದು ತಿಳಿಸಿದರು.

Leave a Reply

comments

Related Articles

error: