ಸುದ್ದಿ ಸಂಕ್ಷಿಪ್ತ

ಸೆ.22 ರಿಂದ ಪಲ್ಲವೋತ್ಸವ

ಮೈಸೂರು,ಸೆ.19 : ವಸುಂಧರ ಪ್ರದರ್ಶನ ಕಲೆಗಳ ಕೇಂದ್ರದ 32ನೇ ವರ್ಷದ ಪಲ್ಲವೋತ್ಸವ ಐದು ದಿನಗಳ ರಾಷ್ಟ್ರಮಟ್ಟದ ಶಾಸ್ತ್ರೀಯ ಸಂಗೀತ ಮತ್ತು ನೃತ್ಯಗಳ ಹಬ್ಬವನ್ನು ಸೆ.22 ರಿಂದ 26ರವರೆಗೆ ಸಂಜೆ 6 ರಿಂದ 9ರವರೆಗೆ ನಾದಬ್ರಹ್ಮ ಸಂಗೀತ ಸಭಾದಲ್ಲಿ ಏರ್ಪಡಿಸಲಾಗಿದೆ.

ಸೆ.22ರ ಸಂಜೆ 6 ಗಂಟೆಗೆ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರಿಂದ ಉದ್ಘಾಟನೆ, ರೋಟರಿ ಉತ್ತರ ವಲಯ ಅಧ್ಯಕ್ಷ ಕೆ.ನಂಜಯ್ಯ ಇರಲಿದ್ದಾರೆ. ವಿಪಿಎಸಿ ಟ್ರಸ್ಟ್ ಅಧ್ಯಕ್ಷ ಕೆ.ವಿ.ಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಘಾಟನಾ ನಂತರ ಡಾ.ವಸುಂಧರ ದೊರೆಸ್ವಾಮಿಯವರ ನೃತ್ಯ ಸಂಯೋಜನೆಯಲ್ಲಿ ಪಂಚಮಹಾಭೂತ ನೃತ್ಯರೂಪಕವನ್ನು ಪ್ರಸ್ತುತ ಪಡಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: