ಮೈಸೂರು

ಮಾವುತರು ಮತ್ತು ಕಾವಾಡಿಗಳ ಮಕ್ಕಳಿಗೆ ಟೆಂಟ್ ಶಾಲೆ, ಗ್ರಂಥಾಲಯ ಆರಂಭ

ಮೈಸೂರು,ಸೆ.19:- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2018ರ ಪ್ರಯುಕ್ತ  ದಸರಾ ಗಜಪಡೆಯೊಂದಿಗೆ ಆಗಮಿಸಿರುವ ಮಾವುತರು ಮತ್ತು ಕಾವಾಡಿಗಳ ಮಕ್ಕಳಿಗೆ ಟೆಂಟ್ ಶಾಲೆ ಆರಂಭಿಸಲಾಗಿದೆ.

ಮೈಸೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಂಪನ್ಮೂಲಾಧಿಕಾರಿಗಳ ಕಾರ್ಯಾಲಯದಿಂದ ಟೆಂಟ್ ಶಾಲೆ ಪ್ರಾರಂಭಿಸಲಾಗಿದ್ದು, 20 ಮಕ್ಕಳಿಗೆ ಪ್ರತಿನಿತ್ಯ ಪಾಠಪ್ರವಚನ ಸಾಗಿದೆ. ಮಾವುತರು, ಕಾವಾಡಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಟೆಂಟ್ ಶಾಲೆ ತೆರೆಯಲಾಗಿದ್ದು, ಟೆಂಟ್ ಶಾಲೆಯ ಜೊತೆಗೆ ಟೆಂಟ್ ಗ್ರಂಥಾಲಯ ಕೂಡ ಆರಂಭವಾಗಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ, ಮೈಸೂರಿನ ಕೇಂದ್ರ ಗ್ರಂಥಾಲಯದ ಸಹಯೋಗದೊಂದಿಗೆ ಟೆಂಟ್ ಗ್ರಂಥಾಲಯ ತೆರೆಯಲಾಗಿದ್ದು, ದೇಶ ಕಂಡ ಮಹಾನ್ ನಾಯಕರ ಜೀವನ ಚರಿತ್ರೆ ಬಗ್ಗೆ ಬೆಳಕು ಚೆಲ್ಲುವ ಪುಸ್ತಕಗಳಿಗೆ ಟೆಂಟ್ ಗ್ರಂಥಾಲಯದಲ್ಲಿ ಮೊದಲ ಆದ್ಯತೆ ನೀಡಲಾಗಿದೆ. ಜೊತೆಗೆ ಮಕ್ಕಳ ಮನರಂಜಿಸಿರುವ ಕತೆ ಪುಸ್ತಕ ಓದಲು ಅನುವು ಮಾಡಿಕೊಡಲಾಗಿದೆ.

ಇದರ ಜೊತೆಗೆ ಮಾವುತರು, ಕಾವಾಡಿಗಳು ಸೇರಿದಂತೆ ಇವರ ಇಡೀ ಕುಟುಂಬ ವರ್ಗದ ಆರೋಗ್ಯ ತಪಾಸಣೆಗಾಗಿ ಉಚಿತ ಆರೋಗ್ಯ ತಪಾಸಣೆ ಕೇಂದ್ರ ಕಾರ್ಯಾರಂಭ ನಡೆಸುತ್ತಿದೆ. ಜಿಲ್ಲಾಡಳಿತ, ಆಯುಷ್ ಇಲಾಖೆ ಸಹಯೋಗದೊಂದಿಗೆ ಆರೋಗ್ಯ ತಪಾಸಣಾ ಕೇಂದ್ರ ಆರಂಭವಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: