ಮೈಸೂರು

ಯಂತ್ರಗಳಿಂದ ಕೌಟುಂಬಿಕ ಸಂಬಂಧಗಳು ನಶಿಸುತ್ತಿವೆ : ನಿತ್ಯಸ್ಥಾನಂದ ಸ್ವಾಮೀಜಿ ಅಭಿಮತ

ಸಮಾಜದಲ್ಲಿ ಹಾಗೂ ಕುಟುಂಬಗಳಲ್ಲಿ ಸಂಬಂಧಗಳು ನಶಿಸುತ್ತಿದ್ದು, ಯಂತ್ರಗಳು ಮಹತ್ವಪೂರ್ಣ ಸ್ಥಾನವನ್ನು ಅಲಂಕರಿಸಿವೆ. ಮನುಷ್ಯನು ಯಾಂತ್ರಿಕನಾಗುತ್ತಿದ್ದು ಬದುಕು ಜಡತ್ವವಾಗುತ್ತಿದೆ ಎಂದು ಮೈಸೂರು ರಾಮಕೃಷ್ಣಾಶ್ರಮದ ನಿತ್ಯಸ್ಥಾನಂದ ಸ್ವಾಮೀಜಿ ತಿಳಿಸಿದರು.

ಅವರು, ಭಾನುವಾರ ಪತ್ರಕರ್ತರ ಭವನದಲ್ಲಿ ಚಂದ್ರಮೌಳಿ ಎಂ.ಎಸ್. ಅವರ ‘ಅಮ್ಮಯ್ಯಜ್ಜ’ ಕಾದಂಬರಿ ಬಿಡುಗಡೆಗೊಳಿಸಿ ನಂತರ ಮಾತನಾಡಿ ಇಂದಿನ ಶಿಕ್ಷಣ ವ್ಯವಸ್ಥೆಯು ಕೇವಲ ಹಣ ಮತ್ತು ವೃತ್ತಿ ದೃಷ್ಠಿಯನ್ನೇ ಇರಿಸಿಕೊಂಡಿರುವುದು ದುಖಃಕರವಾಗಿದೆ, ಮಾನವೀಯತೆಯಿಂದ ಮಾತ್ರ ಮನುಷ್ಯನಾಗಲು ಸಾಧ್ಯ, ಯಂತ್ರಗಳಿಂದ ತಾತ್ಕಾಲಿಕ ನೆಮ್ಮದಿ ಹಾಗೂ ಖುಷಿ ಲಭಿಸಲಿದೆ.  ಅತಿ ಯಂತ್ರದ ಬಳಕೆಯಿಂದ ಮನುಷ್ಯನು ಯಂತ್ರದಂತಾಗುವನು ಎಂದರು. ಮಾನವೀಯ ಹಾಗೂ ಆಧ್ಯಾತ್ಮಿಕದ ದಿವ್ಯ ಸಂಬಂಧಗಳು ಬೆಳೆದಂತೆಲ್ಲ ಸಮಾಜದಲ್ಲಿ ಜಾಗೃತಿ ಹಾಗೂ ಪ್ರಗತಿ ಕಾಣುವುದು ಎಂದು ತಿಳಿಸಿದರು.

ಪುಸ್ತಕ ಬಿಡುಗಡೆಯಲ್ಲಿ ಶಿಕ್ಷಕಿ ಜಗದಾಂಬ, ಮಹಾರಾಜ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಭೈರಪಟ್ಟಣ ಕೃಷ್ಣ, ಬೆಂಗಳೂರಿನ ರಾಜರಾಜೇಶ್ವರಿ ಕಾಲೇಜಿನ ಭಾನು ಹಾಗೂ ಲೇಖಕ ಚಂದ್ರಮೌಳಿ ಉಪಸ್ಥಿತರಿದ್ದರು.

Leave a Reply

comments

Related Articles

error: