ಮನರಂಜನೆಮೈಸೂರು

ಕಲಾವಿದರನ್ನು ದುರುಪಯೋಗಪಡಿಸಿಕೊಂಡಿಲ್ಲ : ‘ತರ್ಲೆವಿಲೇಜ್’ ಚಿತ್ರ ನಿರ್ದೇಶಕ ಕೆ.ಎಂ.ರಘು ಸ್ಪಷ್ಟನೆ

ತಿಥಿ ಸಿನಿಮಾ ಖ್ಯಾತಿಯ ಮುಗ್ಧ, ಅಮಾಯಕ ಸೆಂಚುರಿಗೌಡ ಹಾಗೂ ಗಡ್ಡಪ್ಪನವರನ್ನು ‘ತರ್ಲೆ ವಿಲೇಜ್’ ಸಿನಿಮಾ ತಂಡ  ದುರುಪಯೋಗ ಪಡಿಸಿಕೊಳ್ಳುತ್ತಿದೆ ಎನ್ನುವ ಹೇಳಿಕೆಯು ಸತ್ಯಕ್ಕೆ ದೂರವಾದ ಸಂಗತಿ ಎಂದು ತರ್ಲೆ ಚಿತ್ರ ನಿರ್ದೇಶಕ ಕೆ.ಎಂ.ರಘು ಇಂದು ಪತ್ರಕರ್ತರ ಭವನದಲ್ಲಿ ಸ್ಪಷ್ಟಪಡಿಸಿದರು.

ಭಾನುವಾರ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಗ್ರಾಮೀಣ ಸೊಗಡಿನ ಸಿನಿಮಾ ಆದ ‘ತರ್ಲೆ ವಿಲೇಜ್’ ಚಿತ್ರದ ಪಾತ್ರಗಳಿಗೆ ಜೀವ ತುಂಬಿಸುವುದು ನಿರ್ದೇಶಕನ ಕರ್ತವ್ಯವಾಗಿತ್ತು.  ಆ ನಿಟ್ಟಿನಲ್ಲಿ ನಾನು ನನ್ನ ಕೆಲಸವನ್ನು ನಿರ್ವಹಿಸಿರುವೆ, ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ, ಇನ್ನೊಂದು ಚಿತ್ರದ ಪ್ರೊಮೋಗಾಗಿ ಚಿತ್ರದ ಬಗ್ಗೆ ಅನಗತ್ಯ ವಿವಾದವನ್ನು ಸೃಷ್ಠಿಸಿದ್ದಾರೆ,  ಕಲಾವಿದರ ಅಭಿವ್ಯಕ್ತಿತ್ವವನ್ನು, ಹಿರಿತನವನ್ನು ಸಿನಿಮಾದಲ್ಲಿ ಸಾದರಪಡಿಸಲಾಗಿದೆ. ಕಲಾವಿದರಿಗೆ ವೈಯುಕ್ತಿಕವಾಗಿ ಚಾರಿತ್ರಿಕವಾಗಿ ಧಕ್ಕೆಯಾಗುವಂತೆ ಅಶ್ಲೀಲ, ದ್ವಂದ್ವಾರ್ಥ ಪದಗಳನ್ನು ಬಳಸಿಲ್ಲ ಎಂದು ಸ್ಪಷ್ಟಪಡಿಸಿದರು.

ಸೆನ್ಸಾರ್ ಮಂಡಳಿಯೂ ಯೂ ಸರ್ಟಿಫಿಕೇಟ್ ನೀಡಿದ್ದು ಚಿತ್ರದ ಬೆಳವಣಿಗೆಯನ್ನು ಸಹಿಸದವರು ಅನಗತ್ಯ ವಿವಾದ ಸೃಷ್ಠಿಸುವ ಮೂಲಕ ಚಿತ್ರಕ್ಕೆ ಹಿನ್ನಡೆಯುಂಟು ಮಾಡುತ್ತಿದ್ದಾರೆ ಎಂದು ದೂರಿದರು.

ತಿಥಿ ಖ್ಯಾತಿಯ ಸೆಂಚುರಿ ಗೌಡ ಮಾತನಾಡಿ ನಿರ್ದೇಶಕರು ತಿಳಿಸಿದಂತೆ ಚಿತ್ರದಲ್ಲಿ ಅಭಿನಯಿಸಿರುವೆ, ನನಗೆ ಇವರುಗಳು ಮಾತನಾಡುವುದೇ ತಿಳಿಯುವುದಿಲ್ಲ ಎಂದು ಮುಗ್ಧತೆ ಪ್ರದರ್ಶಿಸಿದರು. ಕಲಾವಿದ ತಮ್ಮಣ್ಣ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಶಿವು ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: