ದೇಶಪ್ರಮುಖ ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಆಸ್ತಿ ಎಷ್ಟಿದೆ ಗೊತ್ತಾ!?

ನವದೆಹಲಿ (ಸೆ.19): ದೇಶದ ಪ್ರಮುಖ ಹುದ್ದೆಯಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಸ್ತಿ ಎಷ್ಟಿರಬಹುದು ಎಂಬ ಕುತೂಹಲ ಸಹಜವಾಗಿ ಎಲ್ಲರಿಗೂ ಇದ್ದೇ ಇರುತ್ತದೆ. ಪ್ರಧಾನ ಮಂತ್ರಿ ಕಾರ್ಯಾಲಯ ಬಿಡುಗಡೆ ಮಾಡಿರುವ ಆಸ್ತಿ ಘೋಷಣೆ ಪತ್ರದಲ್ಲಿ ಈ ಮಾಹಿತಿ ಬಹಿರಂಗಗೊಂಡಿದ್ದು, ಪ್ರಧಾನಿ ಮೋದಿ ಆಸ್ತಿ ಕೇವಲ ಕೇವಲ 2 ಕೋಟಿ ರೂಪಾಯಿಗಳು ಎಂದು ತಿಳಿದುಬಂದಿದೆ.

ಪ್ರಧಾನಿ ಮೋದಿಯವರು ಕೇವಲ 50 ಸಾವಿರ ರೂ.ನಗದನ್ನು ಹತ್ತಿರ ಇಟ್ಟುಕೊಂಡಿದ್ದು, ಬ್ಯಾಂಕ್ ಹಾಗೂ ಇನ್ನಿತರೆ ಸಂಸ್ಥೆಗಳಲ್ಲಿ 1 ಕೋಟಿ ರೂಗಳಷ್ಟು ಆಸ್ತಿ ಮೌಲ್ಯ ಇದೆ. ಅಲ್ಲದೆ ಕೇವಲ 1 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 2 ಲಕ್ಷ ರೂ.ಗಿಂತ ಕಡಿಮೆ ಪ್ರಮಾಣದ ಹೂಡಿಕೆಯನ್ನು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಪ್ರಧಾನಿ ಹೂಡಿಕೆ ಮಾಡಿದ್ದಾರೆ.

ಗುಜರಾತ್‍ನ ಗಾಂಧಿನಗರದ ವಸತಿ ಕಟ್ಟವೊಂದರಲ್ಲಿ ಶೇ.25 ರಷ್ಟು ಮೌಲ್ಯದ ಶೇರುಗಳನ್ನು ಹೊಂದಿದ್ದು ಅದರ ಮೌಲ್ಯ 1 ಕೋಟಿ ರೂನಷ್ಟು ಆಗುತ್ತದೆ. ಅಲ್ಲದೆ 2002ರಲ್ಲಿ 1.30 ಲಕ್ಷ ರೂಪಾಯಿ ಮೌಲ್ಯದ ಒಂದು ಪ್ಲಾಟ್‌ ನ್ನು ನರೇಂದ್ರ ಮೋದಿ ಖರೀದಿಸಿದ್ದಾರೆ. ಆದರೆ ಮೋದಿಗೆ ಯಾವುದೇ ತರಹದ ಸಾಲದ ಹೊರೆಗಳಿಲ್ಲ ಎಂದು ತಿಳಿಸಲಾಗಿದೆ.

ಜತೆಗೆ ಸ್ವಂತ ಕಾರು ಹಾಗೂ ಬೈಕ್ ಕೂಡ ಇಲ್ಲ – ಈ ಮಾಹಿತಿಯನ್ನು ಪ್ರಧಾನಿಗಳ ಕಾರ್ಯಾಲಯ 2018ರ ಮಾರ್ಚ್ 31ರಲ್ಲಿ ಕೊನೆಗೊಂಡ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಆಸ್ತಿ ಘೋಷಣೆಯನ್ನು ಸ್ವಯಂ ಪ್ರೇರಿತವಾಗಿ ಬಿಡುಗಡೆ ಮಾಡಿದೆ. ಪ್ರಧಾನಿಯವರ ಬಳಿ 48,944 ರೂ.ಗಳು ನಗದು ಹಣವಿದ್ದು, 11,29,690 ರೂ.ಗಳನ್ನು ಗಾಂಧಿನಗರದ ಭಾರತೀಯ ಸ್ಟೇಟ್ ಬ್ಯಾಂಕ್‍ನಲ್ಲಿ ಠೇವಣಿಯಾಗಿ ಇರಿಸಿದ್ದಾರೆ.

ಇನ್ನೊಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಲ್ಲಿ 1,07,96,228 ರೂ. ಹಣ ಇರಿಸಿದ್ದಾರೆ. ಇದಲ್ಲದೆ ಎಲ್‌ಎನ್‌ಟಿ ಇನ್‌ಫ್ರಾಸ್ಟ್ರಕ್ಚರ್ ಬಾಂಡ್‍ನಲ್ಲಿ ಆದಾಯ ತೆರಿಗೆ ಉಳಿಸುವ ನಿಟ್ಟಿನಲ್ಲಿ 20 ಸಾವಿರ ಗಳ ಮೌಲ್ಯದ ಬಾಂಡ್ ಖರೀದಿಸಿದ್ದಾರೆ. ಅಲ್ಲದೆ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಸರ್ಕಾರಿ ಒಡೆತನದ ಹೂಡಿಕೆಯಲ್ಲಿ 5,18,235 ರೂ.ಲಕ್ಷ ಮೌಲ್ಯದ ಬಾಂಡ್ ಹಾಗೂ 1,59,281ರೂಗಳ ವಿಮೆ ಪಾಲಿಸಿಯನ್ನು ಹೊಂದಿದ್ದಾರೆ.

ಪ್ರಧಾನಿ ಮೋದಿ ಬಳಿ ಇರುವ ಚಿನ್ನ ಅತ್ಯಂತ ಕಡಿಮೆ ಪ್ರಮಾಣದ್ದಾಗಿದ್ದು ಅದರ ಮೌಲ್ಯ 1,38,060 ರೂಗಳಾಗಿದೆ. ಚರಾಸ್ತಿ ವಿಚಾರಕ್ಕೆ ಬಂದರೆ ಪ್ರಧಾನಿ ಬಳಿ ಇರುವುದು ಒಂದು ವಸತಿ ಸಮುಚ್ಛಯದಲ್ಲಿರುವ ಒಂದು ಪ್ಲಾಟ್ ಮಾತ್ರ. ಇದನ್ನು 2002ರಲ್ಲಿ ಮೋದಿ ಕೇವಲ 1,30,488 ರೂಗಳಿಗೆ ಖರೀದಿಸಿದ್ದರು. ಮೋದಿ ಪ್ರಧಾನಿಯಾದ ಬಳಿಕ 2,47,208 ರೂಪಾಯಿಗಳನ್ನು ಹೂಡಿಕೆ ಮಾಡಿದ್ದು ಇಂದು ಅದರ ಮೌಲ್ಯ 1 ಕೋಟಿ ರೂ ಆಗುತ್ತದೆ ಎಂದು ತಿಳಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: