ಪ್ರಮುಖ ಸುದ್ದಿ

ಭಗವದ್ಗೀತೆಯನ್ನು ಸುಡುವ ಮೂಲಕ ಅಪಮಾನ ಮಾಡಲಾಗಿದೆ : ವಿಶ್ವೇಶ ತೀರ್ಥ ಸ್ವಾಮೀಜಿ

ಇಂಗ್ಲಿಷ್ ಸೇರಿದಂತೆ ಹಲವು ಭಾಷೆಯ ಪದಗಳು ಸಂಸ್ಕೃತದಿಂದಲೇ ಹುಟ್ಟಿವೆ : ಸಚಿವ ಜಿ.ಟಿ.ದೇವೇಗೌಡ

ರಾಜ್ಯ(ಬೆಂಗಳೂರು)ಸೆ.19:- ಇತ್ತೀಚಿಗೆ ಕೆಲ ಸಂಘಟನೆಗಳು ಭಗವದ್ಗೀತೆಯನ್ನು ಸುಡುವ ಮೂಲಕ ಅಪಮಾನ ಮಾಡಿದ್ದಾರೆ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ನಗರದಲ್ಲಿಂದು ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನೂತನ ಕಟ್ಟಡ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಇತ್ತೀಚಿಗೆ ದೆಹಲಿಯಲ್ಲಿ ಸಂವಿಧಾನ ಸುಟ್ಟಿದ್ದಕ್ಕೆ ಎರಡು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಕೆಲ ದಲಿತ ಸಂಘಟನೆಗಳ ಮುಖಂಡರು, ಭಗವದ್ಗೀತೆ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, ಭಗವದ್ಗೀತೆನೊಳಗಿರುವ ಸಂದೇಶ, ಮೌಲ್ಯವನ್ನು ಅರ್ಥ ಮಾಡಿಕೊಳ್ಳದವರು ಗ್ರಂಥವನ್ನು ಸುಟ್ಟು ಅಪಮಾನಗೊಳಿದ್ದಾರೆ ಎಂದರು. ಭಗವದ್ಗೀತೆ ಯಲ್ಲಿ ಯಾವುದೇ ರೀತಿಯಲ್ಲಿ ಮಾನವ ಹಾನಿಕಾರಕ ಸಂದೇಶಗಳು ಇಲ್ಲ. ಯಾವುದು ದುರದ್ದೇಶದಿಂದಾಗಿ, ಈ ಘಟನೆ ನಡೆದು ಹೋಗಿದೆ.ಅಲ್ಲದೆ, ಈ ಭಾಷೆಯ ವ್ಯಾಪ್ತಿ ಹೆಚ್ಚಾಗಬೇಕು.ದೇಶದ ಏಕತೆ ಸಂಸ್ಕೃತ ಭಾಷೆಯಿಂದಲೇ ಸಾಧ್ಯ ಎಂದು ಹೇಳಿದರು. ಸಂಸ್ಕೃತ ಒಂದು ವರ್ಗಕ್ಕೆ, ಒಂದು ಗುಂಪಿಗೆ ಸೇರಿದ ಭಾಷೆ ಎನ್ನುತ್ತಾರೆ.ಆದರೆ, ಈ ಭಾಷೆಯನ್ನು ಪುರಾತನ ಕಾಲದಿಂದಲೂ ಎಲ್ಲಾ ಜಾತಿ, ಪಂಗಡದವರು ಬಳಕೆ ಮಾಡುತ್ತಿದ್ದು, ಇದಕ್ಕೆ ಸಂಬಂಧಿಸಿದ ಪುರಾವೆಗಳು ಇವೆ ಎಂದ ಅವರು, ಭಾಷೆಗಳಲ್ಲಿ ಸಂಸ್ಕೃತ ಊಟ ಇದ್ದಂತೆ, ಆದರೆ, ಎಲ್ಲರೂ ಊಟ ಬಿಟ್ಟು ನೀರು ಕುಡಿಯುತ್ತಾರೆ ಎಂದು ಅಭಿಪ್ರಾಯ ಪಟ್ಟರು.

ಸಂಸ್ಕೃತ ಭಾಷೆಯೂ ಒಂದು ಸಂಸ್ಕೃತಿ ಆಗಿದ್ದು, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಯ ಪದಗಳು ಸಂಸ್ಕೃತದಿಂದಲೇ ಹುಟ್ಟಿವೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು. ಸಂಸ್ಕೃತ ಅತ್ಯಂತ ಪುರಾತನ ಭಾಷೆ ಆಗಿದೆ. ಆದರೆ, ಇಂಗ್ಲಿಷ್, ಜರ್ಮನ್ ಹಾಗೂ ಯುರೋಪಿಯನ್ ಭಾಷೆ ಸೇರಿದಂತೆ ಅನೇಕ ಭಾಷೆಗಳ ಸಾವಿರಾರು ಪದಗಳು, ಸಂಸ್ಕೃತ ದಿಂದಲೇ, ಉಗಮವಾಗಿದೆ. ಉದಾಹರಣೆ, ಮಾತೃ ಎನ್ನುವ ಸಂಸ್ಕೃತ ಪದ ’ಮದರ್’ ಎಂದು ಹೇಳಲಾಗುತ್ತದೆ ಎಂದು ತಿಳಿಸಿದರು. ಸಂಸ್ಕೃತ ಮಹತ್ವ ಅರಿತ ವಿದೇಶಿಯರು, ಈಗಲೂ ಹೊರದೇಶದಿಂದ ಬಂದು ಸಂಸ್ಕೃತ ಅಭ್ಯಾಸ ಮಾಡುತ್ತಿದ್ದಾರೆ.ಆದರೆ, ನಮ್ಮವರಿಗೆ ಈ ಭಾಷೆ ಕಲಿಕೆಗೆ ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಅನೇಕ ಮಠ, ಮಾನ್ಯಗಳು, ಗುರುಗಳು, ಸಂಸ್ಕೃತ ವನ್ನು, ಆಳವಾಗಿ ಅಭ್ಯಸಿಸುವ ಮೂಲಕ ಜ್ಞಾನ ಬಂದಿದೆ ಎಂದು ನುಡಿದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದ ನಾಥ ಸ್ವಾಮೀಜಿ, ಸಂಸ್ಕೃತ ವಿವಿಯ ಕುಲಪತಿ ಪ್ರೊ.ಪದ್ಮಾಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: