ಸುದ್ದಿ ಸಂಕ್ಷಿಪ್ತ

ಸಪ್ನ ಬುಕ್ ಹೌಸ್ ನ 11ನೇ ವಾರ್ಷಿಕೋತ್ಸವ : ಸಪ್ನ ಕಿಯೋಸ್ಕ್ ಗೆ ಚಾಲನೆ ನಾಳೆ

ಮೈಸೂರು,ಸೆ.19 : ಸಪ್ನ ಬುಕ್ ಹೌಸ್ ನ 11ನೇ ವರ್ಷದ ವಾರ್ಷಿಕೋತ್ಸವ ನಿಮಿತ್ತ ಆಧುನಿಕ ತಂತ್ರಜ್ಞಾನದ ಸೌಲಭ್ಯವನ್ನು ಪರಿಚಯಿಸುವ ನಿಟ್ಟಿನಲ್ಲಿ ಮೈಸೂರು ಶಾಖೆಯಲ್ಲಿ ಪುಸ್ತಕ ಪ್ರೇಮಿಗಳಿಗೆ ‘ಸಪ್ನ ಕಿಯೋಸ್ಕ್’ ಅನ್ನು ಪರಿಚಯಿಸುವ ಕಾರ್ಯಕ್ರಮವನ್ನು ಸೆ.20ರಂದು ಬೆಳಗ್ಗೆ 11.30ಕ್ಕೆ  ಏರ್ಪಡಿಸಲಾಗಿದೆ.

ಕುವೆಂಪು ವಿವಿಯ ವಿಶ‍್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ, ಮೈಸೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಸಿ.ನಾಗಣ್ಣ, ಲೇಖಕಿ ಡಾ.ಲತಾ ರಾಜಶೇಖರ್, ಸಪ್ನ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ನಿತಿನ್ ಷಾ ಇವರುಗಳು ಹಾಜರಿರಲಿದ್ದಾರೆ ಎಂದು ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: